ಡೈಲಿ ವಾರ್ತೆ:15 ಮೇ 2023

ಮಂಗಳೂರು : ಮೂರು ಸಿಟಿ ಬಸ್‘ಗಳ ನಡುವೆ ಸರಣಿ ಅಪಘಾತ: ಇಬ್ಬರಿಗೆ ಗಾಯ

ಮಂಗಳೂರು: ಮೂರು ಸಿಟಿ ಬಸ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ನಗರದ ಹಂಪನಕಟ್ಟೆ ಸಿಗ್ನಲ್ ಬಳಿ ನಡೆದಿದೆ.

ಸ್ಟೇಟ್ ಬ್ಯಾಂಕ್ ನಿಂದ ಕುಂಜತ್ತಬೈಲ್ ಕಡೆಗೆ ಹೋಗುತ್ತಿದ್ದ ಬಸ್, ತಲಪಾಡಿ ಕಡೆಗೆ ಹೋಗುತ್ತಿದ್ದ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ತಲಪಾಡಿಗೆ ಹೋಗುತ್ತಿದ್ದ ಬಸ್, ಅದರ ಮುಂಭಾಗದಲ್ಲಿದ್ದ ನೀರುಮಾರ್ಗದ ಬಸ್ಸಿನ ಹಿಂಭಾಗಕ್ಕೆ ಬಡಿದಿದೆ.
ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.