ಡೈಲಿ ವಾರ್ತೆ: 24ಮೇ 2023
ಶೃಂಗೇರಿ: ಬೆಳಂದೂರಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಪ್ರದರ್ಶನ
ಕೋಟ:ತಾಳಮದ್ದಳೆ ಅರ್ಥಧಾರಿ, ಪ್ರಸಂಗ ಕವಿ, ಪ್ರಾಧ್ಯಾಪಕ ಪವನ್ ಕಿರಣ್‍ಕೆರೆ ಮತ್ತು ಶ್ರೀಮತಿ ಆಶಾ ದಂಪತಿಗಳ ಸುಪುತ್ರ ನಿನಾದ ಕಿರಣ್‍ಕೆರೆಯವರ ಬ್ರಹ್ಮೋಪದೇಶ ಶುಭಾವಸರದಲ್ಲಿ ಶೃಂಗೇರಿ ಸಮೀಪದ ಬೆಳಂದೂರಿನಲ್ಲಿ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆಯವರ ನಿರ್ದೇಶನದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಕಲಾವಿದರಿಂದ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ರಚಿತ ‘ವೀರ ವೃಷಸೇನ’ ಯಕ್ಷಗಾನ ಪ್ರದರ್ಶನ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಸುಜಯೀಂದ್ರ ಹಂದೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಸುದೀಪ ಉರಾಳ, ಮುಮ್ಮೇಳದಲ್ಲಿ ಆರ್ಯನ್, ಮನೋಜ್, ಮನೀಷ್, ಚಿನ್ಮಯ್ ಮಯ್ಯ, ಸಮೀಕ್ಷಿತ್ ಆಚಾರ್ ಮತ್ತು ಪ್ರಸಾಧನದಲ್ಲಿ ಸುದರ್ಶನ ಉರಾಳ, ಸುಹಾಸ ಕರಬ, ಆದಿತ್ಯ ಹೊಳ್ಳ. ಮನೋಜ್ ಆಚಾರ್ ಭಾಗವಹಿಸಿದ್ದರು.