ಡೈಲಿ ವಾರ್ತೆ:28 ಮೇ 2023
ಪ್ರಧಾನಿ ಮೋದಿಯವರಿಂದ ನೂತನ ಸಂಸತ್ ಭವನ ಲೋಕಾರ್ಪಣೆ: ಸಂಸತ್ತಿನಲ್ಲಿ ಮೊಳಗಿದ ಹಿಂದೂ, ಮುಸ್ಲಿಂ ಸೇರಿ ಸರ್ವ ಧರ್ಮದ ಪ್ರಾರ್ಥನೆ
ನವದೆಹಲಿ;ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೊಸ ಸಂಸತ್ ಕಟ್ಟಡವನ್ನು ಉದ್ಘಾಟಿಸಿದರು.
ಪೂಜೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿಯವರೊಂದಿಗೆ ಇದ್ದರು.ನೂತನ ಸಂಸತ್ ಭವನದ ಲೋಕಾರ್ಪಣೆ ಸಮಾರಂಭದಲ್ಲಿ ಪುರೋಹಿತರಿಂದ ಸೆಂಗೋಲ್ ಸ್ವೀಕರಿಸಿದ ಪ್ರಧಾನಿ ಮೋದಿಯವರು ಲೋಕಸಭಾ ಸ್ಪೀಕರ್ ಆಸನದ ಬಳಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಪೂಜೆಯ ನಂತರ, ಪ್ರಧಾನಿ ಮತ್ತು ಲೋಕಸಭಾ ಸ್ಪೀಕರ್ ಬಿರ್ಲಾ ಹೊಸ ಲೋಕಸಭೆಗೆ ಪ್ರವೇಶಿಸಿದರು, ಅಲ್ಲಿ ಪಿಎಂ ಮೋದಿ ಸ್ಪೀಕರ್ ಕುರ್ಚಿಯ ಬಳಿ ಐತಿಹಾಸಿಕ ‘ಸೆಂಗೋಲ್’ ಅನ್ನು ಸ್ಥಾಪಿಸಿದರು.
ನಂತರ ಪ್ರಧಾನಮಂತ್ರಿಯವರು ಹೊಸ ಸಂಸತ್ ಭವನದ ಉದ್ಘಾಟನೆಯ ಸಂಕೇತವಾಗಿ ಫಲಕವನ್ನು ಅನಾವರಣಗೊಳಿಸಿದರು.
ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೂ ವಿವಿಧ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮಗಳು ನಡೆಯುತ್ತಿದೆ. ಸಂಸತ್ ಭವನಕ್ಕೆ ಪ್ರಧಾನಿ ಮೋದಿ ಅವರೊಂದಿಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಾಥ್ ನೀಡಿದ್ದಾರೆ. ಸಂಸತ್ ಭವನ ಪ್ರವೇಶಿಸಿದ ಮೋದಿಯವರು ಮೊದಲಿಗೆ ಮಹಾತ್ಮ ಗಾಂಧಿಯವರ ಪ್ರತಿಕಮೆಗೆ ಪುಷ್ಪಾರ್ಚನೆ ನೆರವೇರಿಸಿದರು.
ಹಿಂದೂ, ಕ್ರೈಸ್ತ, ಮುಸಲ್ಮಾನರಿಂದ ಸಂಸತ್ತಿನ ಲಾಬಿಯಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಸೇರಿದಂತೆ ಗಣ್ಯರು ಆಲಿಸುತ್ತಿದ್ದಾರೆ.