ಡೈಲಿ ವಾರ್ತೆ:28 ಮೇ 2023
ಪೊಲೀಸರು ಬಂಧಿಸಿ ಕರೆದೊಯ್ದ RTI ಕಾರ್ಯಕರ್ತ ಪ್ರೈ ಓವರ್ ನಿಂದ ಬಿದ್ದು ಸಾವು; ಪೊಲೀಸರ ಮೇಲೆ ಕೊಲೆ ಆರೋಪ ಮಾಡಿದ ಕುಟುಂಬಸ್ಥರು
ದಾವಣಗೆರೆ:ಪೊಲೀಸರು ಬಂಧಿಸಿ ಕರೆತರುವಾಗ ತಪ್ಪಿಸಿಕೊಳ್ಳುವ ಯತ್ನದಲ್ಲಿ ಫ್ಲೈ ಓವರ್ ಮೇಲಿಂದ ಬಿದ್ದು ಆರ್ ಟಿಐ ಕಾರ್ಯಕರ್ತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಆದರೆ ಆತನ ಕುಟುಂಬ ಪೊಲೀಸರ ಮೇಲೆ ಕೊಲೆ ಆರೋಪ ಮಾಡಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ನಿವಾಸಿಯಾದ ಹರೀಶ್ ಮೃತರು.
ಮಾಹಿತಿ ಹಕ್ಕು ಹೋರಾಟಗಾರನಾಗಿದ್ದ ಹರೀಶ್ ಮೇಲೆ ನಕಲಿ ದಾಖಲೆ ಸೃಷ್ಠಿಸಿ ಬೇರೊಬ್ಬರ ಸೈಟ್ ತನ್ನ ಹೆಸರಿಗೆ ಮಾಡಿಕೊಂಡ ಆರೋಪ ಇತ್ತು.
ಹರೀಶ್ ಗೆ ಇತನ ಪತ್ನಿಯ ಊರಾದ ಚನ್ನಗಿರಿ ಕಾಕನೂರ ಗ್ರಾಮದಿಂದ ಪೊಲೀಸರು ನಿನ್ನೆ ಕರೆ ತಂದಿದ್ದರು. ಈ ವೇಳೆ ದುರ್ಘಟನೆ ನಡೆದಿದೆ.
ಪೊಲೀಸರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಸುರೇಶ್ ಪತ್ನಿಯಿಂದ ಎಸ್ ಐ ಹಾಗೂ ಇಬ್ಬರು ಪಿಸಿಗಳ ವಿರುದ್ದ ದೂರು ನೀಡಿದ್ದಾರೆ. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ದಾವಣಗೆರೆ ಎಸ್ಪಿ ಡಾ.ಕೆ.ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹರೀಶ್ ಕುಟುಂಬದ ಸದಸ್ಯರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ಎದುರು ಹೋರಾಟ ನಡೆಸುತ್ತಿದ್ದಾರೆ.
ಹರೀಶ್ ಹಳ್ಳಿ ಮೇಲೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಹರೀಶ್ ಹಳ್ಳಿ ಮೇಲೆ ವಂಚನೆ ಪ್ರಕರಣ ದಾಖಲಾಗಿತ್ತು.
ಕಳೆದ ರಾತ್ರಿ ಬಂಧಿಸಿ ಕರೆತರುವಾಗ ತಪ್ಪಿಸಿಕೊಳ್ಳುವ ಯತ್ನದಲ್ಲಿ ತೋಳಹುಣಸೆ ಸಮೀಪ ಫ್ಲೈ ಓವರ್ ಮೇಲಿಂದ ಬಿದ್ದು ಗಾಯವಾಗಿದೆ ಎಂದು ಹೇಳಲಾಗಿತ್ತು.