ಡೈಲಿ ವಾರ್ತೆ:28 ಮೇ 2023
✒️ ಓಂಕಾರ ಎಸ್. ವಿ. ತಾಳಗುಪ್ಪ
ಕುಲಪತಿ ಮಗಳ ಹುಟ್ಟುಹಬ್ಬದ ಆಹ್ವಾನ ಪತ್ರಿಕೆಯಲ್ಲಿ ಎಡವಟ್ಟು: ಸರ್ಕಾರದ ಲೆಟರ್ ಹೆಡ್ ನಲ್ಲಿ ಸುತ್ತೋಲೆ ಹೊರಡಿಸಿ ದುರ್ಬಳಕೆ ಆರೋಪ!
ಯಾವುದೇ ರಾಜಕಾರಣಿ ಆಗಿರಲಿ ಸರ್ಕಾರಿ ಉನ್ನತ ಅಧಿಕಾರಿಯೇ ಆಗಿರಲಿ ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಖಾಸಗಿಯಾಗಿಯೇ ಆಹ್ವಾನ ನೀಡುತ್ತಾರೆಯೇ ಹೊರತು. ಸರ್ಕಾರದ ಲೆಟರ್ ಹೆಡ್ ನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ.
ಆದರೆ ಸದ್ಯ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ವೀರಭದ್ರಪ್ಪರವರು ತಮ್ಮ ಮಗಳ ಹುಟ್ಟು ಹಬ್ಬಕ್ಕೆ ಸರ್ಕಾರದ ಲೆಟರ್ ಹೆಡ್ ನಲ್ಲಿ ಸುತ್ತೋಲೆ ಹೊರಡಿಸಿ ಆಹ್ವಾನ ನೀಡಿದ್ದಾರೆ ಎಂಬ ವಿಚಾರ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಅಲ್ಲದೆ ಪ್ರಕಟಗೊಂಡಿರುವ ಲೆಟರ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಪರ ವಿರೋಧಗಳ ಮಾತು ಕೇಳಿಬರುತ್ತಿದೆ. ಅಲ್ಲದೆ ಈ ಮೂಲಕ ಕುಲಪತಿಯವರು ಎಡವಟ್ಟು ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.
ಪತ್ರದ ಒಕ್ಕಣೆ: ನನ್ನ ಮಗಳ ಜನ್ಮ ದಿನದ ಪ್ರಯುಕ್ತ ದಿನಾಂಕ 28-05-23 ರ ಮದ್ಯಾಹ್ನ 12.30 ಕ್ಕೆವಿಶ್ವನಿದ್ಯಾನಿಲಯದ ಆವರಣದಲ್ಲಿರವ ಕುಲಪತಿಗಳ ಗೃಹದಲ್ಲಿ ಸಂತೋಷ ಕೂಟವನ್ನು ಏರ್ಪಡಿಸಿದೆ. ವಿಶ್ವವಿದ್ಯಾನಿಲಯದ ಎಲ್ಲಾ ಅಧ್ಯಾಪಕರು ಅದ್ಯಾಪೇಕತರ ನೌಕರರು ಅತಿಥಿ ಉಪನ್ಯಾಸಕರು ಏಜೆನ್ಸಿ ನೌಕರರುತಪ್ಪದೆ ಹಾಜರಾಗಬೇಕೆಂದು ಕೋರಲಾಗಿದೆ.
ಇದನ್ನ ವೈಯಕ್ತಿಕ ಆಹ್ವಾನವೆಂದು ಭಾವಿಸಿ ಎಲ್ಲರೂ ಸಂತೋಷ ಕೂಟದಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳುತ್ತೇನೆ ಎಂದ ಎಲ್ಲಾ ವಿಭಾಗಗಳ ಮುಖ್ಯಸ್ಥರಿಗೂ ಸುತ್ತೋಲೆ ಹೊರಡಿಸಿದ್ದಾರೆ.