ಡೈಲಿ ವಾರ್ತೆ: 30 ಮೇ 2023
ಬೈಕ್ ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ: ಬೈಕ್ ಸವಾರ ಹಾಗೂ ಆಟೋ ಚಾಲಕ ಮತ್ತು ಪ್ರಯಾಣಿಕರಿಗೆ ಗಂಭೀರ ಗಾಯ
ಬಂಟ್ವಾಳ: ಅಟೋ ರಿಕ್ಷಾ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್ ಸವಾರ ಹಾಗೂ ರಿಕ್ಷಾ ಚಾಲಕ ಸಹಿತ ಪ್ರಯಾಣಿಕರಿಬ್ಬರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಬಂಟ್ವಾಳ ಸಮೀಪದ ಭಂಡಾರಿ ಬೆಟ್ಟು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ರಿಕ್ಷಾ ಚಾಲಕ ಬಂಟ್ವಾಳ ನಾವೂರ ನಿವಾಸಿ ತಾರನಾಥ, ಪ್ರಯಾಣಿಕ ಶಂಕರ ಹಾಗೂ ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿ ಜೊಸ್ಟಿಲಿನ್ ಡಿ.ಸೋಜ, ಸಹ ಸವಾರ ರಶ್ಮಿತ್ ಹೀಗೆ ನಾಲ್ವರು ಗಾಯಗೊಂಡಿದ್ದಾರೆ
ಬೈಕ್ ಸವಾರ ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ವೇಳೆ ಭಂಡಾರಿಬೆಟ್ಟು ಎಂಬಲ್ಲಿ ರಿಕ್ಷಾ ಬಿ.ಸಿ.ರೋಡಿನಿಂದ ಬಂಟ್ವಾಳ ಕಡೆಗೆ ಹೋಗುವ ಸಂದರ್ಭದಲ್ಲಿ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ರಿಕ್ಷಾ ಹಾಗೂ ಬೈಕ್ ಎರಡು ವಾಹನಗಳು ಜಖಂಗೊಂಡಿದೆ. ಹಾಗೂ ಎರಡು ವಾಹನಗಳ ಚಾಲಕರಿಗೆ ಗಂಭೀರವಾದ ಗಾಯವಾಗಿದ್ದು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾಧಿಕಾರಿ ಮೂರ್ತಿ ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ