ಡೈಲಿ ವಾರ್ತೆ:04 ಜೂನ್ 2023

ಕೋಟ: ಮಹಿಳೆ ನಾಪತ್ತೆ

ಕೋಟ:ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬನ್ನಾಡಿ ಗ್ರಾಮದ ಗರಡಿ ರಸ್ತೆಯ ಚಂದು ಮರಕಾಲ್ತಿ (60) ಇವರು ಜೂನ್ 1 ರಿಂದ ಕಾಣೆಯಾಗಿದ್ದಾರೆ.

ಚಂದು ಮರಕಾಲ್ತಿ ಅವರಿಗೆ ದಿನಾಲೂ ಮೂಗಿಗೆ ನಶ್ಯ ಸೇವಿಸುವ ಅಭ್ಯಾಸವಿರುತ್ತದೆ, ಎಂದಿನಂತೆ ಅವರು ಬನ್ನಾಡಿ ಬಸ್ ಸ್ಟ್ಯಾಂಡ್ ಹತ್ತಿರ ಇರುವ ಬೀಡ ಅಂಗಡಿಗೆ ನಶ್ಯ ತರಲು ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿರುವುದಾಗಿದೆ.
ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
ಇವರು ಎಲ್ಲಿಯಾದರೂ ಕಂಡು ಬಂದಲ್ಲಿ 9845893125 ಈ ಮೊಬೈಲ್ ಸಂಖ್ಯೆಗೆ ತಿಳಿಸಬೇಕಾಗಿ ಕೋರಲಾಗಿದೆ.