ಡೈಲಿ ವಾರ್ತೆ: 04 ಜೂನ್ 2023

ಮೊಡಂಕಾಪು : ಕಾರ್ಮೆಲ್ ಸಯುಕ್ತ ಪದವಿ ಪೂರ್ವ ಕಾಲೇಜು ಪ್ರಾರಂಭೋತ್ಸವ

ಬಂಟ್ವಾಳ : ಇಲ್ಲಿನ ಮೋಡಂಕಾಪು ಕಾರ್ಮೆಲ್ ಸಯುಕ್ತ ಪದವಿ ಪೂರ್ವ ಕಾಲೇಜು ಪಿಯುಸಿ ತರಗತಿಯ ಪ್ರಾರಂಭೋತ್ಸವ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜು ಪ್ರಾಂಶುಪಾಲೆ ವಂದನೀಯ ಭಗಿನಿ ನವೀನ ಎ.ಸಿ. ಮಾತನಾಡಿ ಕಾಲೇಜಿನ ವಿದ್ಯಾರ್ಥಿಗಳು, ಹೆತ್ತವರು, ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಪರಸ್ಪರ ಅರಿತು ಹೊಂದಾಣಿಕೆಯಿಂದ ಶ್ರಮಿಸಿದರೆ ಕಾಲೇಜು ಹಾಗೂ ವಿದ್ಯಾರ್ಥಿಗಳಿಗೆ ಯಶಸ್ಸು ಖಂಡಿತ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಚಟುವಟಿಕೆಗಳ ಬಗ್ಗೆ ಉಪ ಪ್ರಾಂಶುಪಾಲೆ ಭಗಿನಿ ಫೆಲ್ಶಿಟ್ಟ ಎ.ಸಿ ಹಾಗೂ ಉಪನ್ಯಾಸಕಿ ಪ್ರೀತಿ ಮಾಡ್ತಾ ಸಮಗ್ರ ಮಾಹಿತಿ ನೀಡಿದರು.

ಉಪನ್ಯಾಸಕ ಸಂತೋಷ್ ಡಿ,ಸೋಜ ಸ್ವಾಗತಿಸಿ, ಸೌಜನ್ಯ ವಂದಿಸಿದರು. ಸುರೇಶ್ ನಂದೊಟ್ಟು ಕಾರ್ಯಕ್ರಮ ನಿರೂಪಿಸಿದರು.