ಡೈಲಿ ವಾರ್ತೆ:07 ಜೂನ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಸಾಗರ:ನಗರಸಭೆ ಅಧ್ಯಕ್ಷಗಾದಿ ಗುದ್ದಾಟ – ಮೀಸಲಾತಿ “ಬಿ. ಸಿ. ಎಂ. ” ಬಿ ” ಅಥವಾ ಸಾಮಾನ್ಯ ಸಾಧ್ಯತೆ – ನಗರಸಭಾ ಸದಸ್ಯ ಲಿಂಗರಾಜು (ಲಿಂಗಣ್ಣ ) ಕುದುರೆ ರೇಸ್ ನಲ್ಲಿ ಮುನ್ನಡೆ

ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ ಮುಗಿದ ಹಿನ್ನಲೆಯಲ್ಲಿ ಶೀಘ್ರದಲ್ಲಿಯೇ ಅಧ್ಯಕ್ಷ & ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಹೊರ ಬೀಳುವ ಸಾಧ್ಯತೆ ಹೆಚ್ಚಿದೆ. ಬಲ್ಲ ಮೂಲಗಳ ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ” ಬಿ. ಸಿ. ಎಂ. ” ಬಿ ” ಅಥವಾ ಸಾಮಾನ್ಯ ಮೀಸಲಾತಿ ಘೋಷಣೆಯಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಸಾಗರ ನಗರಸಭೆಯ ಹಿರಿಯ ಸದಸ್ಯರಾದ ಲಿಂಗರಾಜು ( ಲಿಂಗಣ್ಣ ) ರವರು ವೃತ್ತಿಯಲ್ಲಿ ಅಡಿಕೆ ಉದ್ಯಮಿಯಾಗಿದ್ದೂ, ವೀರಶೈವ ಸಮಾಜದ ಮುಖಂಡರಾಗಿರುವ ಇವರುಗಳು ಹತ್ತು ಹಲವಾರು ಸಂಘ ಸಂಸ್ಥೆಯಲ್ಲಿ ಪದಾಧಿಕಾರಿಗಳಾಗಿ ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸುತ್ತಿರುವುದು ಜನಮಾನಸದಲ್ಲಿ ಲಿಂಗಣ್ಣ ಎಂದೇ ಕರೆಯಲ್ಪಡುವ ಇವರುಗಳು ಸಮಾಜಮುಖಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಸಾಗರ ನಗರಸಭೆಯೂ ಬಹುಮತವೂ ಬಿಜೆಪಿ ಚುನಾಯಿತ ಸದಸ್ಯರಿದ್ದೂ, ಅಧ್ಯಕ್ಷ ಸ್ಥಾನಕ್ಕೆ ತಾ ಮುಂದೂ ನಾ ಮುಂದೂ ಎಂದೂ ತೀವ್ರ ಪೈಪೋಟಿಯ ನಡುವೆ ಲಿಂಗರಾಜು (ಲಿಂಗಣ್ಣ ) ಹೆಸರು ಮುಂಚೂಣಿಯಲ್ಲಿ ಸಾಗರದ ಚಾವಡಿಯಲ್ಲಿ ಗುಸು ಗುಸು ಮಾತನಾಡುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ*

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಲಿಂಗರಾಜು (ಲಿಂಗಣ್ಣ ) ನಾನೊಬ್ಬ ಸಾಗರ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದೂ ಸತ್ಯ, ಬಿಜೆಪಿ ಪಕ್ಷ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದರೆ, ಪ್ರಾಮಾಣಿಕವಾಗಿ, ಜನಸ್ನೇಹಿಯಾಗಿ, ಜನಪರ ಆಡಳಿತ ನೀಡಲು ಬದ್ಧ ಎಂದೂ ಲಿಂಗಣ್ಣ ತಿಳಿಸಿದರು