


ಡೈಲಿ ವಾರ್ತೆ: 10 ಜೂನ್ 2023


✒️ ಓಂಕಾರ ಎಸ್. ವಿ. ತಾಳಗುಪ್ಪ
ಸಾಗರ: ಸರ್ಕಾರಿ ಶಾಲಾ ಮಕ್ಕಳಿಗೆ ಆಟಿಕೆಗಳ ಮಹಾ ಕೊಡುಗೆ
ಸಾಗರ: Spin Master ಸಂಸ್ಥೆ ಮತ್ತು ride for cause ಸಂಸ್ಥೆಯ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಳಸಸಿ, ಸ ಹಿ ಪ್ರಾ ಶಾಲೆ ಕಾರಣಿ, ಸ ಕಿ ಪ್ರಾ ಶಾಲೆ ನಲ್ಯಾರ, ಸ ಕಿ ಪ್ರಾ ಶಾಲೆ ಹಲಗೇರಿ, ಸ ಕಿ ಪ್ರಾ ಶಾಲೆ ಅಳೂರು ಅಂಬಾರುಗುಡ್ಡದ ತಪ್ಪಲಿನಲ್ಲಿ ಇರುವ ಸ ಕಿ ಪ್ರಾ ಶಾಲೆ ಆವಿಗೆ ಶಾಲಾ ಮಕ್ಕಳಿಗೆ ಆಟಿಕೆಗಳ ಮಹಾಪೂರವೇ ಹರಿದುಬಂತು.
ಕಾರು ಬೈಕು, ಡೈಸ್,ಇಂಗ್ಲಿಷ್ ಕಿಟ್, ನೋಟ್ ಬುಕ್, ಕಲಿಕಾ ಸಾಮಗ್ರಿಗಳು. ಗೊಂಬೆಗಳು. ಪಜಲ್ ಗಳು.ರುಬಿಕ್ಸ್ ಕ್ಯೂಬ್ ಗಳು. ಮಕ್ಕಳಲ್ಲಿ ಸೃಜನಶೀಲತೆ, ಕ್ರಿಯಾಶೀಲತೆಯನ್ನು ಬೆಳೆಸಲು ವಿವಿಧ ಮೈಂಡ್ ಗೇಮ್ ಆಟಿಕೆಗಳನ್ನು ನೀಡಿದರು.
ಪ್ರತಿ ಮಗುವೂ ಕೈ ತುಂಬಾ ಆಟಿಕೆಗಳನ್ನು ತೆಗೆದುಕೊಂಡು ಹೋಗುವಾಗ ಅವರು ಮನಸ್ಸಿನಲ್ಲಿ ಅದ ಆನಂದ ನೋಡಲು ಎರಡು ಕಣ್ಣುಗಳು ಸಾಲದು.
ಬೆಂಗಳೂರಿನಿಂದ ಹತ್ತು ಸಂಪನ್ಮೂಲ ವ್ಯೆಕ್ತಿಗಳು ಆಗಮಿಸಿ ಸುಮಾರು 124 ಮಕ್ಕಳಿಗೆ ಆಟಿಕೆಗಳನ್ನು ನೀಡಿದರು
Ride for cause ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಮಧು ಪಿ ಕೆ ಯವರು Spin Master ಸಂಸ್ಥೆಯ ಸಂಪನ್ಮೂಲ ವ್ಯೆಕ್ತಿಗಳಾದ ನಮ್ಮ ನಿಟ್ಟೂರಿನ ಶ್ರೀಕಾಂತ್ ರವರು ಹಾಗೂ ರಾಕೇಶ್, ರವಿಚಂದ್ರ, ರವರು ಜಯದೇವ ವಿ ನಾಯರ್, ಚಂದ್ರಕಾಂತ್,ಅವಿರಾಜ್ ಪಟೇಲೆ, ರಾಜೇಶ್ ಕುಮಾರ್,ಹರಿರಾಮ್ ಸುಂದರ,ವಿನಯಗೌಡ್,ಬೆಂಗಳೂರು, ತಮಿಳುನಾಡು, ಬಿಹಾರ್, ಗಳಿಂದ ಈ ಪ್ರದೇಶದ ಮಕ್ಕಳಿಗೆ ಖುಷಿಯಿಂದ ಆಟಿಕೆಗಳನ್ನು ವಿತರಣೆ ಮಾಡಿದರು.
ಮಂಜುನಾಥ ನಿಟ್ಟೂರು ಇವರ ಮಾರ್ಗದರ್ಶನದಲ್ಲಿ ಧರ್ಮಪ್ಪ ಹೊಸ ಮನೆ ಎಸ್ ಡಿ ಎಂ ಸಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಗಣಪತಿ ಕೊಳೆಗೋಡು,ಅಧ್ಯಕ್ಷರು ಹಾಳಸಸಿ, ಶ್ರೀ ಪದ್ಮರಾಜ್ ನಲ್ಯಾರ, ನೀಲಕುಮಾರ್ ಮೇಲೋಡಿ, ತಿಮ್ಮಪ್ಪ ಹೊಸಮನೆ, ಟೈಬು ರಾಘವೇಂದ್ರ, ನವೀನ್ ನಿಟ್ಟೂರು ,ಪೂರ್ಣಿಮ್ ,ಸುಜನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು. ಪವಿತ್ರ, ಚೈತ್ರ ನಿರೂಪಿಸಿದರು.ದಿವ್ಯ ಸ್ವಾಗತಿಸಿ, ಸುಜಾತ ಶಿಕ್ಷಕರು ವಂದಿಸಿದರು.
ಚಂದ್ರಪ್ಪ ಅಳೂರು ಶಿಕ್ಷಕರು ಹಾಳಸಸಿ ರವರು ಈ ಸಂಸ್ಥೆಯವರು ಈ ಶಾಲೆಗಳಿಗೆ ಆಗಮಿಸಲು ಕಾರಣಿಕರ್ತರು ಇವರ ಈ ಶೈಕ್ಷಣಿಕ ಸೇವೆಯನ್ನು ನೆರೆದಿರುವ ಸರ್ವರೂ ಪ್ರಶಂಸಿಸಿದರು.