ಡೈಲಿ ವಾರ್ತೆ: 10 ಜೂನ್ 2023
ಕೇರಳದಿಂದ ಕಾಲ್ನಡಿಗೆಯಲ್ಲೇ ಮಕ್ಕಾ ತಲುಪಿದ ಕೇರಳದ ಶಿಹಾಬ್ ಚೋಟ್ಟೂರ್.!
ಸೌದಿ ಅರೇಬಿಯಾ:ಕೇರಳದ ಮಲಪ್ಪುರಂ ಜಿಲ್ಲೆಯ ವಲಂಚೇರಿ ಮೂಲದ ಶಿಹಾಬ್ ಚೋಟ್ಟೂರ್ ಕಾಲ್ನಡಿಗೆಯಲ್ಲಿಯೇ 370 ದಿನಗಳಲ್ಲಿ 8640 ಕಿ. ಮೀ. ನಡೆದು ಯಶಸ್ವಿಯಾಗಿ ಮಕ್ಕಾ ತಲುಪಿದ್ದಾರೆ.
2022ರ ಜೂನ್ 2 ರಂದು ಕಾಲ್ನಡಿಗೆ ಮೂಲಕ ಕೇರಳದ ಮಲಪ್ಪುರಂ ಜಿಲ್ಲೆಯ ವಲಂಚೇರಿಯಿಂದ ಯಾತ್ರೆ ಕೈಗೊಂಡಿದ್ದ ಅವರು ಪಾಕಿಸ್ತಾನ, ಇರಾನ್, ಇರಾಕ್ ಮತ್ತು ಕುವೈತ್ ಅನ್ನು ಕ್ರಮಿಸಿ, ಮೇ ಎರಡನೇ ವಾರದಲ್ಲಿ ಕುವೈತ್‌ನಿಂದ ಸೌದಿ ಅರೇಬಿಯಾದ ಗಡಿಯನ್ನು ದಾಟಿದರು. ಸೌದಿ ಅರೇಬಿಯಾವನ್ನು ಪ್ರವೇಶಿಸಿದ ನಂತರ ಶಿಹಾಬ್ ಮದೀನಾಕ್ಕೆ ತಲುಪಿ 21 ದಿನಗಳ ಕಾಲ ತಂಗಿ ಬಳಿಕ ಮಕ್ಕಾ ತಲುಪಿದ್ದಾರೆ ಎಂದು ತಿಳಿದುಬಂದಿದೆ.