ಡೈಲಿ ವಾರ್ತೆ:16 ಜೂನ್ 2023
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗೀಡಾದ ಮಸೂದ್, ಫಾಝಿಲ್ ಸೇರಿ ನಾಲ್ವರು ಯುವಕರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಣೆ
ದಕ್ಷಿಣ ಕನ್ನಡ: ದ.ಕ.ಜಿಲ್ಲೆಯಲ್ಲಿ ಹತ್ಯೆಗೀಡಾಗಿ ಸರಕಾರದಿಂದ ಪರಿಹಾರ ಸಿಗದ ನಾಲ್ವರು ಯುವಕರ ಕುಟುಂಬಗಳಿಗೆ ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕಳೆದ ಜುಲೈ 19ರಂದು ಬೆಳ್ಳಾರೆಯ ಮಸೂದ್, 28ರಂದು ಮಂಗಳಪೇಟೆಯ ಮುಹಮ್ಮದ್ ಫಾಝಿಲ್ ಹತ್ಯೆಯಾಗಿತ್ತು.
ಕಳೆದ ವರ್ಷದ ಡಿಸೆಂಬರ್ 24ರಂದು ಕಾಟಿಪಳ್ಳದ ಅಬ್ದುಲ್ ಜಲೀಲ್ ಹಾಗೂ 2018ರ ಜನವರಿ 3ರಂದು ಕಾಟಿಪಳ್ಳದ ದೀಪಕ್ ರಾವ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕರು ಸರಕಾರದ ವತಿಯಿಂದ ಪರಿಹಾರ ಧನ ಮಂಜೂರು ಮಾಡುವಂತೆ ಒಳಾಡಳಿತ ಇಲಾಖೆಯನ್ನು ಕೋರಿದ್ದರು. ಅದರಂತೆ ಪರಿಹಾರ ಬಿಡುಗಡೆ ಮಾಡಲಾಗಿದೆ.
ಬೊಮ್ಮಯಿ ಸರಕಾರದ ಅವಧಿಯಲ್ಲಿ ಇವರ ಕುಟುಂಬಕ್ಕೆ ಪರಿಹಾರ ಕೊಡದೆ ತಾರತಮ್ಯ ಮಾಡಲಾಗಿತ್ತು. ನೂತನ ಸರಕಾರ ಬಂದ ಬಳಿಕ ಪರಿಹಾರ ನೀಡಲು ಆಗ್ರಹ ಕೇಳಿ ಬಂದಿತ್ತು.