ಡೈಲಿ ವಾರ್ತೆ:17 ಜೂನ್ 2023

ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಕುಂದಾಪುರ ಸಿ.ಇ.ಟಿ ಪರೀಕ್ಷೆಯ ಸಾಧಕರು

ಕುಂದಾಪುರ : ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ 2023 ) ಫಲಿತಾಂಶವು ಗುರುವಾರ ಬಿಡುಗಡೆಯಾಗಿದ್ದು , ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು ಸಿ.ಇ.ಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಸಿ.ಇ.ಟಿ 2023 ರ ಪರೀಕ್ಷೆಗೆ ಕುಳಿತ 123 ವಿದ್ಯಾರ್ಥಿಗಳ ಪೈಕಿ, ಲತೀಫಾ ರಫಾ 897 ರ‍್ಯಾಂಕ್ ಗಳೊಂದಿಗೆ ಅತ್ಯುತ್ತಮ ಸಾಧನೆಯನ್ನು ತೋರಿದ್ದಾರೆ.

ಅನ್ವಿತ್ ಶೆಟ್ಟಿ 1042 ರ‍್ಯಾಂಕ್ ಪಡೆಯುವುದರ ಮೂಲಕ ನಮ್ಮ ಸಂಸ್ಥೆಗೂ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ. ಅಷ್ಟೇ ಅಲ್ಲದೇ ನಮ್ಮ ಸಂಸ್ಥೆಯ ಅನುಶ್ರೀ ಶೆಟ್ಟಿ 1420 ನೇ ರ‍್ಯಾಂಕ್, ಪುರುಷೋತ್ತಮ್ 1763 ನೇ ರ‍್ಯಾಂಕ್, ಶ್ರೀನಿಧಿ ಶೆಟ್ಟಿ 1977 ನೇ ರ‍್ಯಾಂಕ್, ನಿಹಾಲ್ ಎನ್ ಶೆಟ್ಟಿ 2235 ನೇ ರ‍್ಯಾಂಕ್, ಸಿಂಚುಶ್ರೀ ಎನ್ 2284 ನೇ ರ‍್ಯಾಂಕ್, ಸಂಚಿತಾ ವೈ ಎಮ್. 2499 ನೇ ರ‍್ಯಾಂಕ್ , ಪ್ರಣೀತಾ 2502 ನೇ ರ‍್ಯಾಂಕ್ , ವಾಸವಿ ಬೋಳಾರ್ 2530 ನೇ ರ‍್ಯಾಂಕ್, ಪ್ರತೀಕ್ ಶೆಟ್ಟಿ 4327 ನೇ ರ‍್ಯಾಂಕ್ , ಪ್ರಜ್ವಲ್ ಎಮ್. 4678 ನೇ ರ‍್ಯಾಂಕ್ , ಕೀರ್ತಿ ಎಸ್ 5742 ನೇ ರ್ಯಾಂಕ್ , ಪಲ್ಲವಿ ಶೆಟ್ಟಿ 5962 ನೇ ರ‍್ಯಾಂಕ್, ರಾಜಶೇಖರ್ ಶೇಗುಣಸಿ 6244ನೇ ರ‍್ಯಾಂಕ್, ಸಂಜಯ್ 6739ನೇ ರ‍್ಯಾಂಕ್, ಪ್ರೇರಣಾ ಪಿ ನಾಯಕ್ 7026ನೇ ರ‍್ಯಾಂಕ್, ವರ್ಷಿಣಿ ಕೆ .ಎ 7700ನೇ ರ‍್ಯಾಂಕ್ , ರಿನುತಾ 8084 ನೇ ರ‍್ಯಾಂಕ್ , ದರ್ಶಿತ್ ಶೆಟ್ಟಿ 8087 ನೇ ರ‍್ಯಾಂಕ್ , ನಿಷ್ಕಲಾ 8421 ನೇ ರ‍್ಯಾಂಕ್ , ಶ್ರೀನಿಧಿ ಎಸ್ 8569 ನೇ ರ‍್ಯಾಂಕ್ , ಯಶ್ವಂತ್ ಪಿ 8863 ನೇ ರ‍್ಯಾಂಕ್, ಅನುಪಮಾ 8868ನೇ ರ‍್ಯಾಂಕ್ , ಫವಾಜ್ ಅಹಮದ್ ಅಲಾಮ್ 8926ನೇ ರ‍್ಯಾಂಕ್ , ಶ್ರೀಶಾ ಎಸ್ ಶೆಟ್ಟಿ 8933ನೇ ರ‍್ಯಾಂಕ್ , ಸಿಂಚನಾ 9052 ನೇ ರ‍್ಯಾಂಕ್, ಸೃಜನ್ ಯು ಶೆಟ್ಟಿ 9096ನೇ ರ‍್ಯಾಂಕ್ , ಸಿಂಚನಾ 9485 ನೇ ರ‍್ಯಾಂಕ್ ಮತ್ತು ಸಂಪ್ರೀತ್ ಎಸ್ ಶೆಟ್ಟಿ 9763 ನೇ ಅತ್ಯುತ್ತಮ ರ‍್ಯಾಂಕ್ ಗಳನ್ನು ಪಡೆಯುವುದರೊಂದಿಗೆ ನಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಸಾಧನೆಗೈದ ಪ್ರತಿ ಸಾಧಕ ವಿದ್ಯಾರ್ಥಿಗಳಗೆ ಎಂ.ಎಂ. ಹೆಗ್ಡೆ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ, ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿಗಳಾದ ಪ್ರತಾಪಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಯವರು ಇವರ ಸಾಧನೆಗೆ ಸಂತಸದ ಅಭಿನಂದನೆಯನ್ನು ಸಲ್ಲಿಸಿದ್ದಾರೆ.