ಡೈಲಿ ವಾರ್ತೆ:17 ಜೂನ್ 2023
ಸಹೋದರಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ, ನ್ಯಾಯಾಲಯದ ತೀರ್ಪು ವಿಷಾದಕರ:ರಾಜೇಶ್ ಪವಿತ್ರನ್
ಸೌಜನ್ಯಳಿಗೂ ನ್ಯಾಯ ಸಿಗಲಿಲ್ಲ,ನಿರಪರಾಧಿಯೊಬ್ಬನನ್ನು ಅಮಾನುಷವಾಗಿ ನಡೆಸಿಕೊಳ್ಳಲಾಯಿತು.
ಹಾಗಾದರೆ ಅತ್ಯಾಚಾರ ಮಾಡಿ ಕೊಂದ ನಿಜವಾದ ಅಪರಾಧಿ ಯಾರು? ಎಂದು ಹಿಂದೂ ಮುಖಂಡ ರಾಜೇಶ್ ಪವಿತ್ರನ್ ಪ್ರಶ್ನೆ ಮಾಡಿದರು.
ನಿರಪರಾಧಿ ಸಂತೋಷ್ ರಾವ್ ನನ್ನು ಇಷ್ಟು ಕಾಲ ಜೈಲಲ್ಲಿ ಇಟ್ಟಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ ?
ಅಲ್ಲಿ ಇದುವರೆಗೂ ತನಿಖೆ ನಡೆದು C report ಆದ ಅಪರಿಚಿತ ಸ್ತ್ರೀ ಶವಗಳ ಎಲ್ಲಾ ಕೇಸುಗಳನ್ನು ಮರು ತನಿಖೆ ಮಾಡಿಸಬೇಕು ಹಾಗು ಹೊಸತಾಗಿ ತನಿಖಾ ಆಯೋಗವನ್ನು ರಚಿಸಿ ಅದಕ್ಕೆ” ಸೌಜನ್ಯ ಆಯೋಗ” ಅಂತಾ ಹೆಸರಿಡಬೇಕು ಎಂದು ಅವರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವನ್ನು ಆಗ್ರಹಿಸಿದರು..