ಡೈಲಿ ವಾರ್ತೆ:19 ಜೂನ್ 2023
ವರದಿ: ಅದ್ದಿ ಬೊಳ್ಳೂರು
ಹಳೆಯಂಗಡಿ: ಬೊಳ್ಳೂರಿನಲ್ಲಿ ಪುರಾತನ ಪದ್ಧತಿ ಹಿಜಾಮ ಚಿಕಿತ್ಸಾ ಶಿಬಿರ
ಪುರಾತನ ಕಾಲದ ಚಿಕಿತ್ಸಾ ಪದ್ಧತಿಯಲ್ಲಿ ಯುನಾನಿ ಚಿಕಿತ್ಸೆಯೂ ಒಂದು, ಅದರಲ್ಲಿಯೂ ಸಾವಿರದ ಐನೂರು ವರ್ಷಗಳ ಹಿಂದಿನ ಕಾಲದ ಪದ್ಧತಿಯ ಹಿಜಾಮ ಎಂಬ ಚಿಕಿತ್ಸಾ ಪದ್ಧತಿಯು ಸುಮಾರು 72 ಕಾಯಿಲೆಗಳಿಗೆ ನೇರ ಪರಿಣಾಮಕಾರಿಯಾಗಿದೆ.
ಇಂತಹ ಪುರಾತನ ಚಿಕಿತ್ಸಾ ಶಿಬಿರವೊಂದು ಹಳೆಯಂಗಡಿ ಸಮೀಪದ ಬೊಳ್ಳೂರಿನ ರಿಲಯನ್ಸ್ ಭವನದಲ್ಲಿ ನಡೆಯಿತು..
“ಇಂದಿನ ಕಾಲಘಟ್ಟದಲ್ಲಿ ಸುಲಭ ಹಾಗೂ ನೂತನ ರೀತಿಯ ಕೀಟನಾಶಕ ಸಿಂಪಡಣೆಯ ಭರದಲ್ಲಿ ಜನ ಹೊಲದಲ್ಲಿ ಬೆಳೆದ ವಿಷಕಾರಿ ಆಹಾರಗಳನ್ನೇ ಸೇವಿಸುತ್ತಾ ಇಂದು ಹಲವಾರು ಕಾಯಿಲೆಗಳನ್ನು . ಮೈಗೂಡಿಸಿಕೊಂಡು ನೂರಾರು ಔಷಧಿಗಳನ್ನು ಸೇವಿಸುತ್ತಾ ಸುಸ್ತಾದ ಈ ಸಂದರ್ಭದಲ್ಲಿ ಜನ, ಇಂದು ಯಾವುದೇ ಅಡ್ಡ ಪರಿಣಾಮವಿಲ್ಲದ ಔಷಧರಹಿತ ಯುನಾನಿ ಪದ್ಧತಿಯ ಹಿಜಾಮ ಚಿಕಿತ್ಸೆಗೆ ಮೊರೆ ಹೋಗುತ್ತಿದ್ದಾರೆ.
ಈ ಸಂದರ್ಭದಲ್ಲಿ ಹಳೆಯಂಗಡಿಯ ರಿಲಯನ್ಸ್ ಎಸೋಸಿಯೇಶನ್ ಬೊಳ್ಳೂರು ಇದರ ಆಶ್ರಯದಲ್ಲಿ ‘ಶಾಫಿ ಹರ್ಬಲ್ & ಹಿಜಾಮ ಕ್ಲಿನಿಕ್ ಸಹಯೋಗದೊಂದಿಗೆ, ಯುನಾನಿ ವೈದ್ಯರಾದ ಡಾ. ಸೈಯ್ಯದ್ ಝಾಹಿದ್ ಹುಸೈನ್ (B.U.M.S) ಮತ್ತು ಹಿಜಾಮ ತಜ್ಞರ ತಂಡ ಸೇರಿ ನಡೆಸಿದ ಶಿಬಿರದಲ್ಲಿ 48 ಮಹಿಳೆಯರು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಜನ ಪುರಾತನ ಪದ್ದತಿಯ ಹಿಜಾಮ ಚಿಕಿತ್ಸೆ ಪಡೆದುಕೊಳ್ಳವ ಮೂಲಕ ಪುರಾತನ ಯುನಾನಿ ಚಿಕಿತ್ಸಾ ಪದ್ಧತಿಗೆ ಮೊರೆ ಹೋದರು.
ಬೊಳ್ಳೂರು ಮುಹಿಯದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ‘ಹಾಜಿ ಅಲ್ ಅಝ್ಹರ್ ಫೈಝಿ’ ಚಾಲನೆ ನೀಡುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ರಿಲಯನ್ಸ್ ಸಂಘಟನೆಯ ಪ್ರಮುಖರಾದ ಕಳಂದರ್ ಕೌಶಿಕ್, ರಿಯಾಜ್ ಕೊಪ್ಪಳ, ಹಾರಿಸ್ ನವರಂಗ್, ಕಬೀರ್, ಮುಬಾರಕ್, ಮುಮ್ತಾಜ್ ಅಲಿ, ಸಮೀಮ್, ಅಕ್ಬರ್, ಫಾರುಕ್, ಮುಂತಾದವರು ಉಪಸ್ಥಿತರಿದ್ದರು.