ಡೈಲಿ ವಾರ್ತೆ:19 ಜೂನ್ 2023

ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ವಾರ್ಷಿಕಾಧಿವೇಶನ:ಸನ್ಮಾನ – ವೈದ್ಯಕೀಯ ನೆರವು ಹಸ್ತಾಂತರ

ಕೋಟೇಶ್ವರ :ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ ಹದಿನೇಳು ವಲಯಗಳಲ್ಲಿ ಕೋಟೇಶ್ವರ ವಲಯ ಸಶಕ್ತವಾಗಿದೆ. ಇಲ್ಲಿ ಬಹುಮುಖ ಪ್ರತಿಭಾಶಾಲಿಗಳು, ದಾನಿಗಳು, ಸಮಾಜ ಸೇವಾಸಕ್ತರು, ರಾಜಕೀಯದಲ್ಲಿರುವವರು ಹೀಗೆ ವಿಭಿನ್ನ ವ್ಯಕ್ತಿತ್ವದ ಸಹೃದಯರು ಇದ್ದಾರೆ. ಇಂತವರು ಈ ವಲಯ ಮಾತ್ರವಲ್ಲದೆ ಪರಿಷತ್ತಿಗೇ ಒಂದು ಶಕ್ತಿ. ಹೀಗೆ ಸಮಾಜಮುಖಿ ಚಟುವಟಿಕೆಗಳ ಮೂಲಕ ಸಮಾಜಬಾಂಧವರಿಗೆ ನೆರವು ಒದಗಿಸುವುದರೊಂದಿಗೆ ವಲಯ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸಲಿ” – ಎಂದು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಕಾರ್ಯದರ್ಶಿ ರತ್ನಾಕರ ಉಡುಪ ಹಾರೈಸಿದರು.

ಕೋಟೇಶ್ವರದ ಶ್ರೀ ಕೋದಂಡ ರಾಮ ಮಂದಿರದಲ್ಲಿ ನಡೆದ ಪರಿಷತ್ ನ ಕೋಟೇಶ್ವರ ವಲಯದ ವಾರ್ಷಿಕ ಅಧಿವೇಶನದಲ್ಲಿ ಮುಖ್ಯ ಅಭ್ಯಾಗತರಾಗಿ ಅವರು ಮಾತನಾಡಿದರು.

ಪರಿಷತ್ತಿಗೆ ಅತಿ ಹೆಚ್ಚು ಸದಸ್ಯ ಮತ್ತು ಆರ್ಥಿಕ ಬಲವನ್ನು ತಂದುಕೊಟ್ಟ ಪೂರ್ವಾಧ್ಯಕ್ಷ ಗೋಪಾಡಿ ಶ್ರೀನಿವಾಸ ಹೆಬ್ಬಾರ್, ಪ್ರಸಕ್ತ ವಲಯಾಧ್ಯಕ್ಷ ವಾದಿರಾಜ ಹೆಬ್ಬಾರ್ ರ ಸೇವೆಯನ್ನು ಅವರು ಶ್ಲಾಘಿಸಿದರು.

ಮುಖ್ಯ ಅತಿಥಿ, ಪರಿಷತ್ ನ ಮಹಿಳಾ ಘಟಕಾಧ್ಯಕ್ಷೆ ಸಂಧ್ಯಾ ಉಡುಪ ಮಹಿಳಾ ಸಂಘಟನೆಗೆ ಒತ್ತು ನೀಡುವಂತೆ ಕರೆನೀಡಿದರು.

ಶ್ರೀ ಕೋದಂಡ ರಾಮ ಮಂದಿರ ಅಭಿವೃದ್ಧಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಂದಿರ ಸಮಿತಿಯ ಪೂರ್ವಾಧ್ಯಕ್ಷ ಬೀಜಾಡಿ ಗೋಪಾಲ ಬಿಳಿಯ -ದೇವಕಿ ದಂಪತಿ ಮತ್ತು ಗೋಪಾಡಿಯ ಪ್ರಗತಿಪರ ಕೃಷಿಕ ರಾಘವೇಂದ್ರ ಉಡುಪ – ಅಂಜಲಿ ದಂಪತಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳಾ ಘಟಕಾಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ಮತ್ತು ಕಾರ್ಯದರ್ಶಿ ನಾಗರತ್ನ ಉಡುಪ ಸನ್ಮಾನಿತರನ್ನು ಪರಿಚಯಿಸಿದರು. ಸನ್ಮಾನಿತರು ಕೃತಜ್ಞತೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಪರಿಸರದ ಅರ್ಹರಿಗೆ ವೈದ್ಯಕೀಯ ನೆರವು ವಿತರಿಸಲಾಯಿತು.

ಕೋಟೇಶ್ವರ ವಲಯಾಧ್ಯಕ್ಷ ಬಿ. ವಾದಿರಾಜ ಹೆಬ್ಬಾರ್ ಸಭಾಧ್ಯಕ್ಷತೆ ವಹಿಸಿದ್ದರು. ವಲಯದ ಐನೂರಕ್ಕೂ ಹೆಚ್ಚು ಸದಸ್ಯರ ವಿಳಾಸ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ವಲಯ ಕಾರ್ಯದರ್ಶಿ ನಾಗೇಂದ್ರ ಬಿಳಿಯ ವಾರ್ಷಿಕ ವರದಿ ವಾಚಿಸಿದರು.

ವಲಯ ಗೌರವಾಧ್ಯಕ್ಷ ಪಿ. ಗಣಪಯ್ಯ ಚಡಗ, ಮಹಿಳಾ ಘಟಕಾಧ್ಯಕ್ಷೆ ವಾಣಿಶ್ರೀ ಹೆಬ್ಬಾರ್ ವೇದಿಕೆಯಲ್ಲಿದ್ದರು. ಸಹಕರಿಸಿದವರ ಪಟ್ಟಿಯನ್ನು ಯುವ ವಿಪ್ರ ಘಟಕ ಕಾರ್ಯದರ್ಶಿ ಕೌಶಿಕ್ ಅಡಿಗ ವಾಚಿಸಿದರು. ವಿಪ್ರವಾಣಿ ಸಂಪಾದಕ ಪ್ರೋ. ಶಂಕರ ರಾವ್ ಕಾಳಾವರ, ವಲಯ ಗೌರವ ಸಲಹೆಗಾರ ವೈ ಎನ್ ವೆಂಕಟೇಶಮೂರ್ತಿ ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರೋ. ಕೆ ವಿ ಕೆ ಐತಾಳ, ವಸಂತಿ ಮಿತ್ಯಂತ, ಕಲ್ಪನಾ ಐತಾಳ ಮತ್ತು ಕೃಷ್ಣಮೂರ್ತಿ ಕಡೇಕಾರ್ ಗಣ್ಯರನ್ನು ಗೌರವಿಸಿದರು.

ವಲಯ ಉಪಾಧ್ಯಕ್ಷ ರಾಘವೇಂದ್ರ ಹತ್ವಾರ್, ಪೂರ್ವಾಧ್ಯಕ್ಷ ವಕ್ವಾಡಿ ಸುಬ್ರಹ್ಮಣ್ಯ ಐತಾಳ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವರಾಮ ಉಪಾಧ್ಯ, ವಾದಿರಾಜ ಅಡಿಗ, ಚಂದ್ರಿಕಾ ಅಡಿಗ, ನಿರ್ಮಲಾ ಭಟ್, ಮನೋರಮಾ ಅಡಿಗ, ವಲಯ ಯುವ ಘಟಕಾಧ್ಯಕ್ಷ ನಾಗರಾಜ ಅಡಿಗ, ಶ್ರೀ ಕೋದಂಡ ರಾಮ ಮಂದಿರ ಸಮಿತಿ ಅಧ್ಯಕ್ಷ ಶ್ರೀನಿವಾಸ ಮೂರ್ತಿ, ಕೋಣಿ ಕೃಷ್ಣದೇವ ಕಾರಂತ ಮೊದಲಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ನಾಗರತ್ನ ಉಡುಪ, ಮತ್ತು ರೂಪಾ ವರ್ಣರ ನಿರ್ದೇಶನದಲ್ಲಿ ಮಹಿಳಾ ಸದಸ್ಯರು ಮತ್ತು ಮಕ್ಕಳು ವೈವಿಧ್ಯಮಯ ನೃತ್ಯ, ಪ್ರಹಸನಗಳನ್ನು ಪ್ರಸ್ತುತಪಡಿಸಿದರು. ಸವಿತಾ ಸಹಕರಿಸಿದರು.

ವಲಯ ಗೌರವ ಸಲಹೆಗಾರ ಕೆ. ಜಿ. ವೈದ್ಯ ಕಾರ್ಯಕ್ರಮ ನಿರ್ವಹಿಸಿ ಉಪಾಧ್ಯಕ್ಷ ಟಿ. ಅಶೋಕ್ ಹೊಳ್ಳ ವಂದಿಸಿದರು.