ಡೈಲಿ ವಾರ್ತೆ: 19 ಜೂನ್ 2023
ಅಮ್ಟಾಡಿ : ಇಂದಿರಾ ಸೇವಾ ಕೇಂದ್ರ ಉದ್ಘಾಟನೆ – ಗ್ಯಾರಂಟಿ ಯೋಜನೆಗಳ ಉಚಿತ ನೋಂದಣಿ, ರಮಾನಾಥ ರೈ
ಬಂಟ್ವಾಳ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಮತ್ತು ಉಚಿತವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತೊಡಗಿಕೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಕರೆ ನೀಡಿದರು.
ಅಮ್ಟಾಡಿ ಹೊಸವಕ್ಲು ಸುವರ್ಣಭಾಗೀ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶುಭರಂಭಗೊಂಡ ಇಂದಿರಾ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ, ಶಕ್ತಿ ಯೋಜನೆಗಳನ್ನು ಉಚಿತ ಅನ್ ಲೈನ್ ನೋಂದಣಿ ಸೇವೆಯನ್ನು ಇಂದಿರಾ ಸೇವಾ ಕೇಂದ್ರದ ಮೂಲಕ ಮಾಡಲಾಗುವುದು. ಮತ್ತು ಈ ಸೇವೆಯನ್ನು ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಂದುವರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಕ್ಷ ಪ್ರಮುಖರಾದ ಪಿಯೂಸ್ ಎಲ್ ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಮಲ್ಲಿಕಾ ವಿ ಶೆಟ್ಟಿ, ಫ್ಲೋಸಿ ಡಿಸೋಜಾ, ಚಂದ್ರಶೇಖರ ಶೆಟ್ಟಿ, ಡೊನಾಲ್ಡ್ ಬರೆಟ್ಟೊ, ರೋಕೇಶ್ ರೂಪೇಶ್ ಡಿಸೋಜಾ, ರಿಚರ್ಡ್ ಮೆನೆಜಸ್, ಅನಿಲ್ ಫ್ರಾಂಕ್, ತಾರಾನಾಥ ಪೂಜಾರಿ ಕಲೈ ಕೊಡಿ, ನಿತ್ಯನಾಧ ಕಲೈ, ಥಾಮಸ್ ಸಲ್ಡಾನಾ, ರಾಮಣ್ಣ ಪೂಜಾರಿ ಕಗಿತ್ಲು, ಪೂರ್ಣಿಮಾ , ಪ್ರಕಾಶ್ ಹೊಸಹೊಕ್ಲು, ಸೌಮ್ಯ , ಉಮೇಶ ಪೂಜಾರಿ, ಧರ್ಣಪ್ಪ ಪೂಜಾರಿ ಹೊಸಹೊಕ್ಲು ಮೊದಲಾದವರು ಉಪಸ್ಥಿತರಿದ್ದರು.