



ಡೈಲಿ ವಾರ್ತೆ:19 ಜೂನ್ 2023


ಪ್ರಧಾನ ಸಂಪಾದಕರು: ಇಬ್ರಾಹಿಂ ಕೋಟ
ಒಡಿಶಾ ನ್ಯಾಷನಲ್ ಇಂಟರ್ ಸ್ಟೇಟ್ ಸೀನಿಯರ್ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್ ತೆರಳಿದ ಕೋಟದ ವಿದ್ಯಾರ್ಥಿಗೆ ಕಾಲು ಮೂಳೆ ಮುರಿತ!

ಕೋಟ :ಒಡಿಶಾ ರಾಜ್ಯದ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಕಳೆದ 15 ರಿಂದ 19ರ ವರೆಗೆ ನಡೆದ 62 ನೇ ನ್ಯಾಷನಲ್ ಇಂಟರ್ ಸ್ಟೇಟ್ ಸೀನಿಯರ್ ಅಥ್ಲೆಟಿಕ್ಸ್ ಚಾಪಿಯನ್ ಶಿಪ್ಸ್ 2023 ರ ಕರ್ನಾಟಕ ಪ್ರತಿನಿಧಿಯಾಗಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಅಖಿಲೇಶ್ ತ್ರಿವಿಧ ಜಿಗಿತದ ದ್ವಿತೀಯ ಸುತ್ತಿನಲ್ಲಿ ಜಿಗಿತ ಮಾಡುವ ಸಂದರ್ಭ ಬಿದ್ದು ಕಾಲಿನ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಯಾಗಿದೆ.
ಬ್ರಹ್ಮಾವರ ತಾಲ್ಲೂಕು ಮಾಬುಕಳದ ಬಿ.ಡಿ. ಶೆಟ್ಟಿ ಕಾಲೇಜಿನಲ್ಲಿ ಅಖಿಲೇಶ್ ಕೋಟ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ಇನ್ಸ್‌ಪೆಕ್ಟರ್ ಜಯಪ್ರಕಾಶ್ ಹಾಗೂ ಸುಮನಾ ದಂಪತಿಯ ಪುತ್ರ ಅಖಿಲೇಶ್.

ಈ ಹಿಂದೆ ಚೆನೈಯಲ್ಲಿ ನಡೆದ ಅಖಿಲ ಭಾರತ ಅಂತರ್ ವಿ. ವಿ ಅಥ್ಲೆಟಿಕ್ಸ್ ನಲ್ಲಿ ತ್ರಿವಿಧ ಜಿಗಿತದಲ್ಲಿ 16.16 ಮೀ. ಜಿಗಿದು ಚಿನ್ನದ ಪದಕ ಗಳಿಸಿದ್ದರು. 2022ರಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಟ್ರಿಪಲ್ ಜಂಪ್‌ನಲ್ಲಿ ಚಿನ್ನ, ಗುಜರಾತ್‌ನ ನಾಡಿಯಾಡ್‌ನಲ್ಲಿ ನಡೆದ ಜೂನಿಯರ್ ಫೆಡರೇಶನ್ ಕಪ್ ಪಂದ್ಯಾಟದಲ್ಲಿ ಟ್ರಿಪಲ್ ಜಂಪ್ ನಲ್ಲಿ ಬೆಳ್ಳಿ ಪದಕ, 2022ರಲ್ಲಿ ಹರಿಯಾಣ ಪಂಚಕುಲದಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ಟ್ರಿಪಲ್ ಜಂಪ್ ನಲ್ಲಿ ಬೆಳ್ಳಿ, 2020ರಲ್ಲಿ ಅಸ್ಸಾಂ ಗುವಾಹಟಿಯಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್ಸ್ ಟ್ರಿಪಲ್ ಜಂಪ್ ನಲ್ಲಿ ಚಿನ್ನ, ಪಂಜಾಬ್‌ನ ಸಂಗ್ರೂರ್‌ಲ್ಲಿ ರಾಷ್ಟ್ರೀಯ ಶಾಲಾ ಆಟಗಳ ಪಂದ್ಯಾಟದ ಟ್ರಿಪಲ್ ಜಂಪ್ ನಲ್ಲಿ ಕಂಚು, ಉಡುಪಿಯಲ್ಲಿ ನಡೆದ ದಕ್ಷಿಣ ವಲಯ ರಾಷ್ಟ್ರೀಯ ಅಥ್ಲೆಟಿಕ್ಸ್ ಟ್ರಿಪಲ್ ಜಂಪ್ ನಲ್ಲಿ ಕಂಚು ಪದಕಗಳನ್ನು ಪಡೆದಿದ್ದರು. ಈ ಬಾರಿಯೂ ಒಡಿಶಾದಲ್ಲಿ ನಡೆದ ಅಥ್ಲೇಟಿಕ್ಸ್ ನಲ್ಲಿ ಇಂಟರ್ನ್ಯಾಷನಲ್ ಆಯ್ಕೆಗೆ ಆತ್ಮವಿಶ್ವಾಸದಿಂದ ಹೋಗಿ ಎರಡು ಬಾರಿ ತ್ರಿವಿಧ ಜಿಗಿತದ ಟ್ರೈಲ್ ನಲ್ಲಿ ದ್ವಿತೀಯ ಸ್ಥಾನ ಪಡೆದ್ದಿದ್ದರು.
ಆದರೆ ಅಂತಿಮ ಸೆಲೆಕ್ಷನ್ ಗೆ 6 ಬಾರಿ ತ್ರಿವಿಧ ಜಿಗಿತ ಇದ್ದು ಮೊದಲ ಜಿಗಿತ ಪಾಸ್ ಆಗಿ ಎರಡನೇ ಜಿಗಿತದಲ್ಲಿ ಕಾಲು ಮುರಿತಕ್ಕೊಳಗಾಗಿ ಪದಕ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗೆ ಆಘಾತವಾಗಿದೆ.