



ಡೈಲಿ ವಾರ್ತೆ: 25 ಜೂನ್ 2023


ಕಟಪಾಡಿ: ಬೈಕ್ ಗೆ ಕಾರು ಡಿಕ್ಕಿ – ಬೈಕ್ ಸವಾರನಿಗೆ ಗಾಯ
ಕಟಪಾಡಿ: ರಾಷ್ಟೀಯ ಹೆದ್ದಾರಿ 66ರ ಉದ್ಯಾವರ ಜೈಹಿಂದ್ ಜಂಕ್ಷನ್ ಬಳಿ ಕಾರು ಹಾಗೂ ಬೈಕ್ ನಡುವೆ ರವಿವಾರ ರಾತ್ರಿ ಅಪಘಾತ ನಡೆದಿದೆ.
ಗಾಯಳು ಬೈಕ್ ಸವಾರ ಉದ್ಯಾವರ ಬೊಲ್ಜೆ ಗರಡಿ ನಿವಾಸಿ ರಾಮ ದೇವಾಡಿಗ ಎಂದು ತಿಳಿದು ಬಂದಿದೆ.
ಆತನನ್ನು ಉಡುಪಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಡುಪಿಯಲ್ಲಿ ಬೈಕ್ ಮೆಕ್ಯಾನಿಕ್ ವೃತ್ತಿಯನ್ನು ನಡೆಸುತ್ತಿದ್ದಾರೆ.
ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ವಾಹನಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಯಿತು.