



ಡೈಲಿ ವಾರ್ತೆ:26 ಜೂನ್ 2023


ಉಪ್ಪಿನಂಗಡಿ ಕೇಂದ್ರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಮುಸ್ತಾಫಾ ಕೆಂಪಿ ರವರು ನಿಧನ
ದಕ್ಷಿಣ ಕನ್ನಡ:ಉಪ್ಪಿನಂಗಡಿ ಕೇಂದ್ರ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಮುಸ್ತಾಫಾ ಕೆಂಪಿ ರವರು ಜೂ.26 ರಂದು ಸೋಮವಾರ ಆಕಸ್ಮಿಕವಾಗಿ ನಿಧನ ಹೊಂದಿರುತ್ತಾರೆ.
ಮೃತರು ಮುಸ್ಲಿಂ ಸಮುದಾಯದ ನಾಯಕರಾಗಿ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮುಸ್ತಾಫಾ ಕೆಂಪಿ ರವರ ನಿಧನವು ಮುಸ್ಲಿಂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿರುತ್ತದೆ.
ಸೃಷ್ಟಿಕರ್ತನು ಮೃತರ ಪರಲೋಕ ಯಾತ್ರೆಯನ್ನು ಸುಗಮಗೊಳಿಸಿ ಸ್ವರ್ಗೋದ್ಯಾನದಲ್ಲಿ ಉನ್ನತ ಸ್ಥಾನ ಮಾನವನ್ನು ನೀಡಿ ಅನುಗ್ರಹಿಸಲಿ ಹಾಗೂ ಕುಟುಂಬಕ್ಕೂ ಬಂಧು ಬಳಗಕ್ಕೂ ನೋವನ್ನು ಸಹಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ.
ಮರಣ ಹೊಂದಿದ ಕೆಂಪಿ ಮುಸ್ತಫಾ ರವರಿಗೆ ಸಂತಾಪ ಸೂಚಿಸುವ ವಾಯ್ಸ್ ಓಫ್ ಮುಸ್ಲಿಂ ಕರ್ನಾಟಕ