ಡೈಲಿ ವಾರ್ತೆ:27 ಜೂನ್ 2023

ಕಾವ್ಯ ಎಚ್. ಹಂದೆ ನಟಿಸಿದ ಏಕವ್ಯಕ್ತಿ ರಂಗ ಪ್ರದರ್ಶನ ‘ಹಕ್ಕಿ ಮತ್ತು ಅವಳು’ ಮತ್ತು ಸಂವಾದ ಕಾರ್ಯಕ್ರಮ

ಕೋಟ:ಕೋಟದ ಸು.ವಿ.ಕಾ. ಸಾಂಸ್ಕøತಿಕ ಸಂಘಟನೆಯ ಕಾವ್ಯ ಎಚ್ ಹಂದೆ ನಟಿಸಿದ ಕಾವ್ಯಾಭಿನಯ, ಡಾ. ಶ್ರೀಪಾದ ಭಟ್ ಪರಿಕಲ್ಪನೆ ಮತ್ತು ನಿರ್ದೇಶನದ ಏಕವ್ಯಕ್ತಿ ರಂಗ ಪ್ರದರ್ಶನ ‘ಹಕ್ಕಿ ಮತ್ತು ಅವಳು’ ಮತ್ತು ಸಂವಾದ ಕಾರ್ಯಕ್ರಮ ಜೂನ್ 23 ರಂದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಾಂಸ್ಕøತಿಕ ಸಂಘಟನೆ, ವಿದ್ಯಾರ್ಥಿನಿಯರ ಸಂಘ ಹಾಗೂ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಮತ್ತು ಜೂನ್ 24 ರಂದು ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಕಡೆಕೊಪ್ಪಲ ಪ್ರತಿಷ್ಠಾನದ ವತಿಯಿಂದ ನಡೆಯಿತು.

ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಎನ್. ವಾಸರೆ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಥಮ ದರ್ಜೆ ಸರಕಾರಿ ಕಾಲೇಜಿನ ಪ್ರಾಂಶುಪಾಲರು, ಸಾಹಿತಿಗಳು ಆದ ಎಂ. ಡಿ. ವಕ್ಕುಂದ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿತಿಯಾಗಿ, ವಿಟಿಯು ನಿದೇಶಕರಾದ ವಿಜೇತ್ ಸ್ವಾದಿ, ಪತ್ರಕರ್ತ ಯು.ಎಸ್, ಪಾಟೀಲ್, ರಂಗಕರ್ಮಿ ಉಪನ್ಯಾಸಕ ಸುಜಯೀಂದ್ರ ಹಂದೆ ಕೋಟ, ಗಣೇಶ್ ನೀನಾಸಂ, ಶಿವಮೊಗ್ಗದ ಸಮುದಾಯದ ಲಕ್ಷ್ಮೀನಾರಾಯಣ, ರಂಗ ನಟ ಪ್ರಭಾಕರನ್ ಉಪಸ್ಥಿತರಿದ್ದರು.

ಅನುಷ್ ಶೆಟ್ಟಿ, ಮುನ್ನಾ ಮೈಸೂರು ಸಂಗೀತ ನಿರ್ದೇಶನ, ರಾಜು ಮಣಿಪಾಲ ಅವರ ಬೆಳಕಿನ ಸಂಯೋಜನೆ, ಗೋಪಿ ಸಾಗರ ಇವರ ರಂಗ ಸಜ್ಜಿಕೆ, ನಭಾ ವಕ್ಕುಂದ ಅವರ ಚಿತ್ರಕಲೆ, ಸ್ವರ್ಣ ಪ್ರಭು, ಅಭಿಲಾಷ ಎಸ್, ಮಾನಸಿ ಸುಧೀರ್ ಅವರ ಸಹ ನಿರ್ದೇಶನ, ಕಾವ್ಯ ಪ್ರಭು ಅವರ ರಂಗ ಸಹಾಯ, ಸುವಿಕಾ ಸಂಘಟನೆಯ ವಿನಿತ ಸುಜಯೀಂದ್ರ ಅವರ ನಿರ್ವಹಣೆಯಲ್ಲಿ ಕುಂದಾಪುರ ಭಂಡಾಕಾರ್ಸ್ ಕಾಲೇಜಿನ ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ಕಾವ್ಯ ಎಚ್ ಹಂದೆ ನಟಿನೆಯ ‘ಹಕ್ಕಿ ಮತ್ತು ಅವಳು’ ಯಶಸ್ವಿಯಾಗಿ ಮೂಡಿ ಬಂತು.
ನಂತರ ನಡೆದ ಸಂವಾದದಲ್ಲಿ ಸಾಹಿತಿ, ಡಾ| ವಿನಯ ಜಿ ನಾಯಕ್ ದಿಕ್ಸೂಚಿ ಮಾತುಗಳನ್ನಾಡಿದರು. ನಾಸಿರ್ ಅಹ್ಮದ್ ಸ್ವಾಗತಿಸಿ, ಬಿ. ಎನ್. ಅಕ್ಕಿ ವಂದಿಸಿದರು. ಉಷಾ ನಾಯಕ್ ನಿರ್ವಹಿಸಿದರು