ಡೈಲಿ ವಾರ್ತೆ:27 ಜೂನ್ 2023

ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಆಚರಣೆಗೆ ಮನವಿ

ಪವಿತ್ರ ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಹಬ್ಬವಾಗಿದ್ದು ಇಬ್ರಾಹಿಂ ಮತ್ತು ಇಸ್ಮಾಯಿಲ್ ನಬಿ (ಅ) ರವರ ಸ್ಮರಣೆಯಾಗಿದೆ. ಬಕ್ರೀದ್‌ ಹಬ್ಬದ ಪ್ರಯುಕ್ತ ಖುರ್ಬಾನಿ ಕೊಡುವುದು ಇಸ್ಲಾಮಿನ ವಿಧಿಯಾಗಿರುತ್ತದೆ.

ಬಕ್ರೀದ್ ಹಬ್ಬದ ಆಚರಣೆ ಮತ್ತು ಧಾರ್ಮಿಕ ಚಟುವಟಿಕೆಯ ಸಂದರ್ಭಗಳಲ್ಲಿ ಪ್ರಾಣಿ ಬಲಿದಾನ ಪ್ರಕ್ರಿಯೆಯಲ್ಲಿ ಯಾವುದೇ ಸಮುದಾಯದ ಧರ್ಮಿಯವರ ಭಾವನೆಗೆ ಧಕ್ಕೆಯಾಗದಂತೆ ಕಾನೂನಿನ ಚೌಕಟ್ಟಿಗೆ ಒಳಪಟ್ಟಂತೆ ಖುರ್ಬನಿ ನೀಡಬೇಕೆಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಸಿ. ಹೆಚ್. ಅಬ್ದುಲ್ ಮುತ್ತಾಲಿ ವಂಡ್ಸ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮೌಲಾನ ಅಬ್ದುಲ್ ರಹ್ಮಾನ್ ಕಲ್ಕಟ್ಟ ಉಪಾಧ್ಯಕ್ಷರು ಜಿಲ್ಲಾ ವಕ್ಫ್ ಸಲಹಾ ಸಮಿತಿ, ಉಡುಪಿ ರವರು ಉಪಸ್ಥಿತರಿದ್ದರು.