ಡೈಲಿ ವಾರ್ತೆ:27 ಜೂನ್ 2023

✒️ *ಓಂಕಾರ ಎಸ್. ವಿ. ತಾಳಗುಪ್ಪ*

ಸೊರಬ ಪಟ್ಟಣ ಪಂಚಾಯಿತಿ ಕಛೇರಿ ಗುಮಾಸ್ತೆ ಲಂಚಬಾಕಿ ಚಂದ್ರಕಲಾ ಲೋಕಾಯುಕ್ತ ಬಲೆಗೆ


ಸೊರಬ: ಶ್ರೀ ಮಂಜುನಾಥ, ಬಿನ್‌. ಕೊರಗಯ್ಯ ಶೆಟ್ಟಿ, ವ್ಯವಸಾಯ ಕೆಲಸ, ಚರ್ಚ್‌ ಸಮುದಾಯ ಭವನದ ಹಿಂಭಾಗ
ಜೀವಜ್ಯೋತಿ ಬಡಾವಣೆ, ಹೊಸಪೇಟೆ ಹಕ್ಕಲು, ಸೊರಬ ಟೌನ್‌, ಶಿವಮೊಗ್ಗ ಜಿಲ್ಲೆ ವಾಸಿಯಾಗಿದ್ದು, ಇವರ
ಸಹೋದರ ಭಾಸ್ಕರ್‌ ಕೆ.ಎಸ್‌. ಇವರು ಬೆಂಗಳೂರಿನಲ್ಲಿ ವಾಸವಾಗಿರುತ್ತಾರೆ. ಸೊರಬ ತಾಲ್ಲೂಕು ಕಸಬಾ ಹೋಬಳಿಯ
ಹಳೇ ಸೊರಬ ಸ.ನಂ.179ರಲ್ಲಿ ಅಲಿನೇಷನ್‌ ಆಗಿದ್ದರಲ್ಲಿ ಡಿ.6. ನಂ. 2/ನೇದ್ದರ ನಿವೇಶನವು ಪಿರ್ಯಾದುದಾರರ
ಸಹೋದರ ಭಾಸ್ಕರ್‌ ಇವರ ಹೆಸರಿನಲ್ಲಿರುತ್ತದೆ. ಸದರಿ ನಿವೇಶನವು ಹಳೇ ಸೊರಬ ಗ್ರಾ.ಪಂ. ವ್ಯಾಪ್ತಿಗೆ ಒಳಪಟ್ಟಿದ್ದು,
ಸೊರಬ ಟೌನ್‌ ಈಗ ಪುರಸಭೆಯಾಗಿ ಮಾರ್ಪಟ್ಟಿದ್ದರಿಂದ ಸ ಸದರಿ ನಿವೇಶನವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ
ಮಾಡಬೇಕಾಗಿದ್ದು, ಸಹೋದರ ಭಾಸ್ಕರ್‌ ಇವರಿಗೆ ಈ ಕೆಲಸದ ನಿಮಿತ್ತ ಓಡಾಡಲು ಅನಾನುಕೂಲವಾಗಿದ್ದರಿಂದ
ಮರಸಭೆಗೆ ಅರ್ಜಿ ಸಲ್ಲಿಸಿ ನಿವೇಶನವನ್ನು ಮರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಿಸಿಕೊಳ್ಳುವ ಕೆಲಸ ಮಾಡಲು
ಫಿರ್ಯಾದಿಗೆ ಸೂಚಿಸಿದ್ದರಿಂದ ಫಿರ್ಯಾದಿಯು ದಿಃ17-06-2023ರಂದು ಸೊರಬ ಪುರಸಭೆಗೆ ಹೋಗಿ ಸಂಬಂಧಪಟ್ಟ
ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ… ನಂತರ ದಿ: 21-06-2023ರಂದು ಈ ವಿಚಾರಕ್ಕೆ ಸಂಬಂಧಪಟ್ಟಂತೆ
ಫಿರ್ಯಾದಿಯು ಸೊರಬ ಪುರಸಭೆ ಕಛೇರಿಗೆ ಹೋಗಿ ಅಲ್ಲಿನ ಕೇಸ್‌ ವರ್ಕರ್‌ ಚಂದ್ರಕಲಾ ಇವರನ್ನು
ವಿಚಾರಿಸಿದಾಗ, ಅವರು ನಿವೇಶವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿ ಖಾತೆ ಮಾಡಲು ಖರ್ಚಾಗುತ್ತದೆ. ಎಂದು
ತಿಳಿಸಿರುತ್ತಾರೆ. ನಂತರ ಫಿರ್ಯಾದಿ ಮಂಜುನಾಥ ಇವರು ದಿ:26-06-2023ರಂದು ಕೇಸ್‌ ವರ್ಕರ್‌ ಚಂದ್ರಕಲಾ ಇವರ
ಮೊಬೈಲ್‌ಗೆ ತನ್ನ ಮೊಬೈಲ್‌ನಿಂದ ಕರೆ ಮಾಡಿ ನಿವೇಶನದ ಖಾತೆ ಬಗ್ಗೆ ವಿಚಾರಿಸಿದಾಗ ಅವರು ನಿವೇಶನವನ್ನು
ಪುರಸಭೆಗೆ ಸೇರಿಸಿ ಖಾತೆ ಮಾಡಿಕೊಡಲು ಸಾಹೇಜ್ರಿಗೆ, ಆರ್‌ಓ, ಆರ್‌ಐ. ಮ್ಯಾನೇಜರ್‌, ಬಿಲ್‌ ಕಲೆಕ್ಟರ್‌ ಇವರಿಗೆ
ಕೊಡಲು ಖರ್ಚಾಗುತ್ತದೆ, ನೀವು 15, 000/-ಗಳನ್ನು ತೆಗೆದುಕೊಂಡು ಬನ್ನಿ ಎಂದು ಲಂಚದ ಹಣಕ್ಕೆ ಬೇಡಿಕೆಯಿಟ್ಟಿರುತ್ತಾರೆ. ಆದರೆ ಲಂಚದ ಹಣ ಕೊಡಲು ಇಷ್ಟವಿರದ ಮಂಜುನಾಥ, ಸೊರಬ ಇವರು ಶಿವಮೊಗ್ಗ ಲೋಕಾಯುಕ್ತ
ಕಛೇರಿಗೆ ದೂರು ಕೊಟ್ಟಿ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಅದರಂತೆ ಇಂದು ದಿ: 27-06-2023ರಂದು
ಆಪಾದಿತ ನೌಕರರು ತನ್ನ ಕಛೇರಿಯಲ್ಲಿ ರೂ. 15000/-ಗಳ ಲಂಚದ ಹಣವನ್ನು ಪಡೆಯುವಾಗ
ನಮ್ಮ ಅಧಿಕಾರಿಗಳ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿರುತ್ತಾರೆ.
ಆಪಾದಿತೆ ಕಡು ಭ್ರಷ್ಟೇ ಚಂದ್ರಕಲಾ, ಕೇಸ್‌ವರ್ಕರ್‌, ಪುರಸಭೆ ಕಛೇರಿ, ಸೊರಬ ಇವರನ್ನು ತನಿಖಾಧಿಕಾರಿಗಳಾದ
ಶ್ರೀ ಹೆಚ್‌. ರಾಧಾಕೃಷ್ಣ, ಮೊಲೀಸ್‌ ನಿರೀಕ್ಷಕರು ಇವರು ಬಂಧಿಸಿದ್ದು, ಮುಂದಿನ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಕಛೇರಿಯ ಪೊಲೀಸ್‌ ಅಧೀಕ್ಷಕರಾದ ಶ್ರೀ ಎನ್‌. ವಾಸುದೇವರಾಮ ಇವರ
ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಆಪಾದಿತರನ್ನು ಬಂಧಿಸಲಾಗಿರುತ್ತದೆ. ಟ್ರ್ಯಾಪ್‌ ಕಾಲಕ್ಕೆ ಶಿವಮೊಗ್ಗ
ಲೋಕಾಯುಕ್ತ ಕಛೇರಿಯ ಧಕ್ಷ ಪ್ರಾಮಾಣಿಕ ಜನಸ್ನೇಹಿ ಪೊಲೀಸ್‌ ಉಪಾಧೀಕ್ಷಕರಾದ ಶ್ರೀ ಉಮೇಶ ಈಶ್ವರ ನಾಯ್ಕ್‌, ಮತ್ತು ಸಿಬ್ಬಂದಿಗಳಾದ
ಪ್ರಸನ್ನ, ಸಿ.ಹೆಚ್‌.ಸಿ, ಮಹಾಂತೇಶ, ಸಿ.ಹೆಚ್‌.ಸಿ, ಬಿ.ಟಿ. ಚನ್ನೇಶ, ಸಿಪಿಸಿ ಪ್ರಶಾಂತ್ ಕುಮಾರ್, ಸಿಪಿಸಿ,
ಅರುಣ್‌ಕುಮಾರ್‌, ಸಿಪಿಸಿ, ಸುರೇಂದ್ರ, ಸಿ.ಪಿ.ಸಿ. ರಘುನಾಯ್ಯ, ಸಿ.ಪಿ.ಡಬ್ಲ್ಯೂ. ಸಿ. ಪಟ್ಟಮ್ಯ ಮಪಿಸಿ,
ಸಾವಿತ್ರಮೃ ಮಪಿಸಿ, ಗಂಗಾಧರ, ಎಪಿಸಿ, ತರುಣ್‌ಕುಮುರ್‌, ಎಪಿಸಿ, ಮತ್ತು ಪ್ರದೀಪ್‌ ಕುಮಾರ್‌,
ಎಪಿಸಿ, ಜಯಂತ್‌ ಎಪಿಸಿ ಮತ್ತು ವಿ. ಗೋಪಿ, ಎಪಿಸಿ ಇವರುಗಳು ಹಾಜರಿದ್ದು, ಕರ್ತವ್ಯ ನಿರ್ವಹಿಸುತ್ತಾರೆ.