ಡೈಲಿ ವಾರ್ತೆ:27 ಜೂನ್ 2023

“ಮಾದಕ ದ್ರವ್ಯ ವ್ಯಸನದಿಂದ ವಿದ್ಯಾರ್ಥಿಗಳನ್ನು ರಕ್ಷಿಸೋಣ”: ನ್ಯಾಯಾಧೀಶೆ ಶರ್ಮಿಳಾ

ಬ್ರಹ್ಮಾವರ: ನ್ಯಾಯಾಧೀಶೆ ಶರ್ಮಿಳಾ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬ್ರಹ್ಮಾವರ ಇದರ “ಮಾದಕ ವಸ್ತು ವಿರೋಧಿ ಸಂಘ” ಮತ್ತು “ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ” ಇವರ ಸಂಯುಕ್ತ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇಲ್ಲಿಯ ಸಭಾಂಗಣದಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಯುತ ರವೀಂದ್ರ ಉಪಾಧ್ಯರ ಅಧ್ಯಕ್ಷತೆಯಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ನ್ಯಾಯಾಧೀಶೆ ಶ್ರೀಮತಿ ಶರ್ಮಿಳಾ ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾದಕ ದ್ರವ್ಯ ವ್ಯಸನದ ಕುರಿತು ಮತ್ತು ವಿದ್ಯಾರ್ಥಿಗಳ ಹಿತ ರಕ್ಷಣೆಗೆ ಸಂಬಂಧಿಸಿದ ವಿವಿಧ ಕಾನೂನುಗಳು ಮತ್ತು ಸಂಘಟನೆಗಳ ಬಗ್ಗೆ ವಿವರಿಸಿದರು.

ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನಶ್ಯಾಸ್ತ್ರಜ್ಞ ರಾದ ಶ್ರೀಯುತ ನಾಗರಾಜ್ ಮೂರ್ತಿ ಯವರು ಮಾದಕ ದ್ರವ್ಯದ ವಿವಿಧ ರೂಪಗಳು ಮತ್ತು ಅವುಗಳು ವಿದ್ಯಾರ್ಥಿಗಳ ಬದುಕಿನ ಮೇಲೆ ಬೀರುವ ಪ್ರಭಾವದ ಕುರಿತು ಸವಿವರವಾಗಿ ತಿಳಿಸಿದರು. ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅರೆಕಾಲಿಕ ಸ್ವಯಂಸೇವಕರಾದ ನಿವೃತ್ತ ಶಿಕ್ಷಕಿ ಶ್ರೀಮತಿ ತಿಲೋತ್ತಮೆ, ಮತ್ತು ಹಿರಿಯ ನಿವೃತ್ತ ಶಿಕ್ಷಕಿ ಸುಲೋಚನಾ ಕೊಡವೂರು ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಬದುಕಿನ ಕುರಿತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದು ಉಪನ್ಯಾಸಕಿ ಶ್ರೀಮತಿ ಅನುರಾಧ ಎಚ್ ಕಾರ್ಯಕ್ರಮವನ್ನು ನಿರ್ವಹಿಸಿದರು.