ಡೈಲಿ ವಾರ್ತೆ:29 ಜೂನ್ 2023
ಮರ ತೆರವು ಕಾರ್ಯಾಚರಣೆ ವೇಳೆ ತಪ್ಪಿದ ದುರಂತ: ಮತ್ತೊಂದು ಮರ ಬಿದ್ದು ಕೂದಲೆಳೆ ಅಂತರದಲ್ಲಿ ಬಚಾವ್ ಆದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ.!
(ವಿಡಿಯೋ ವೀಕ್ಷಿಸಿ)
ಕುಂದಾಪುರ: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಲಾಡಿ ರಸ್ತೆಯಲ್ಲಿ ಬರುತ್ತಿದ್ದ ವೇಳೆ
ಮರಯೊಂದು ರಸ್ತೆಗೆ ಬಿದ್ದಿದ್ದು ಶಾಸಕರು ಆ ಮರವನ್ನು ತೆರವುಗೊಳಿಸುವಾಗ ಮತ್ತೊಂದು ಮರ ಬಿದ್ದು ಕೂದಲೆಳೆ ಅಂತರದಲ್ಲಿ ಬಚಾವ್ ಆದ ಘಟನೆ ಗುರುವಾರ ನಡೆದಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದಲೂ ಉತ್ತಮ ಮಳೆ ಸುರಿಯುತ್ತಿದ್ದು ಅದ್ರಲ್ಲೂ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಭಾರೀ ಮಳೆಗೆ ಮರಗಳು ಉರುಳಿ ಬಿದ್ದಿವೆ. ಹಾಲಾಡಿ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದಿದ್ದು, ಇದೇ ರಸ್ತೆಯಲ್ಲಿ ಸಾಗುತ್ತಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ತಮ್ಮ ಬೆಂಬಲಿಗರ ಜೊತೆ ಸೇರಿ ಮರ ತೆರವು ಕಾರ್ಯಾಚರಣೆ ವೇಳೆ ಮತ್ತೊಂದು ಮರ ಉರುಳಿ ಬಿದ್ದಿದ್ದು. ಅಪಾಯವನ್ನು ಅರಿತ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಬೆಂಬಲಿಗರು ಪಕ್ಕಕ್ಕೆ ಓಡುತ್ತಿದ್ದಂತೆಯೇ ಭಾರೀ ಅಪಾಯ ತಪ್ಪಿದಂತಾಗಿದೆ. ಸಮಾಜಸೇವೆಯ ಮೂಲಕವೇ ಪ್ರಸಿದ್ದಿಯನ್ನು ಪಡೆದಿದ್ದ ಶಾಸಕ ಗಂಟಿಹೊಳೆ ಇದೀಗ ಶಾಸಕರಾದ ನಂತರವೂ ಜನಸಾಮಾನ್ಯರಂತೆಯೇ ಬದುಕುತ್ತಿದ್ದಾರೆ. ಶಾಸಕರಾದರೂ ಕೂಡ ತಾವೇ ಸ್ವತಃ ಮರ ತೆರವು ಕಾರ್ಯವನ್ನು ನಡೆಸುವ ಮೂಲಕ ಶಾಸಕ ಗುರುರಾಜ್ ಗಂಟಿಹೊಳೆ ಇತರರಿಗೆ ಮಾದರಿಯಾಗಿದ್ದಾರೆ.
ಮರ ತೆರವು ಕಾರ್ಯಾಚರಣೆಯಲ್ಲಿ ಶಾಸಕರೊಂದಿಗೆ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಕೈ ಜೋಡಿಸಿದ್ದಾರೆ.