ಡೈಲಿ ವಾರ್ತೆ:29 ಜೂನ್ 2023

ಕೋಟ- ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ:
ಕೋಟಿ ಚೆನ್ನಯ್ಯರ ಬದುಕಿನಂತೆ ಈ ಸಂಘ ಕಂಗೊಳಿಸಲಿ- ಮಾಜಿ ಸಚಿವ ಕೋಟ

ಕೋಟ: ಕೋಟದ ಅಮೃತೇಶ್ಚರಿ ದೇವಸ್ಥಾನದ ಸಮೀಪ ಪ್ರಭು ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶುಭಾರಂಭಗೊಳ್ಳಲಿರುವ ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘವನ್ನು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಕೋಟಿ ಚೆನ್ನಯ್ಯ ಸಹಕಾರಿ ಸಂಘ ಉನ್ನತಿ ಸಾಧಿಸಿ ಯಶಸ್ಸಿನ ಮೆಟ್ಟಿಲೆರಲಿ ಎಂಬ ಸದಾಶಯ ನಮ್ಮದಾಗಿರುತ್ತದೆ. ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸಹಕಾರಿ ಸಂಘಗಳು ಸರಿಸಮನಾಗಿ ನಿಂತು ಕಾರ್ಯನಿರ್ವಹಿಸುತ್ತಿರುವುದು ಆರೋಗ್ಯಕರ ಬೆಳವಣ ಗೆಯಾಗಿದೆ, ಅದೇ ರೀತಿ ಕೋಟಿ ಚೆನ್ನಯ್ಯ ಸಹಕಾರಿ ಸಂಘ ಕೋಟಿ ಚೆನ್ನಯ್ಯರ ಬದುಕಿನಂತೆ ಕಂಗೊಳಿಸಲಿ ಅವರ ಆದರ್ಶವನ್ನಿಟ್ಟು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಷೇರು ಪತ್ರವನ್ನು ಸಾಲಿಗ್ರಾಮ ಪ.ಪಂ ಸದಸ್ಯ ಶ್ಯಾಮಸುಂದರ್ ನಾಯರಿ ಹಸ್ತಾಂತರಿಸಿದರು., ಗಣಕಯಂತ್ರವನ್ನು ಸೌಹಾರ್ದ ಸಹಕಾರಿಗಳ ಸಂಘ, ಉಡುಪಿ ಇದರ ಅಧ್ಯಕ್ಷ ಮಂಜುನಾಥ ಎಸ್.ಕೆ. ಭದ್ರತಾ ತಿಜೋರಿಯನ್ನು ಕೋಟ ಅಮೃತೇಶ್ವರಿ ದೇವಸ್ಥಾನದ ಅಧ್ಯಕ್ಷ ಆನಂದ ಸಿ. ಕುಂದರ್,ಠೇವಣಾತಿ ಪತ್ರವನ್ನು ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ,
ಪಿಗ್ಮಿ ಯಂತ್ರಯನ್ನು ಕಟ್ಟಡ ಮಾಲಿಕ ನರಸಿಂಹ ಪ್ರಭು ಹಸ್ತಾಂತರಿಸಿದರು, ಅನುಮತಿ ಪತ್ರ ಹಸ್ತಾಂತರವನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಗೈದರು. ಮುಖ್ಯ ಅತಿಥಿಗಳಾಗಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕೋಟ ಗ್ರಾ.ಪಂ ಅಧ್ಯಕ್ಷ ಅಜಿತ್ ದೇವಾಡಿಗ, ಕಟ್ಟಡ ಮಾಲಿಕ ನರಸಿಂಹ ಪ್ರಭು, ಉದ್ಯಮಿ ಶೀನ ಪೂಜಾರಿ, ಹರ್ತಟ್ಟು, ಉಪಾಧ್ಯಕ್ಷ ಸರೋಜ ಮನೋಹರ, ನಿರ್ದೇಶಕರಾದ ನವೀನ್ ಪೂಜಾರಿ, ಮಾಧವ ಪೂಜಾರಿ, ಅಶೋಕ್ ಪೂಜಾರಿ, ಜಯಂತಿ,ಸಂತೋಷ್ ಸುವರ್ಣ, ಜನಾರ್ದನ ಪೂಜಾರಿ, ನಾಗೇಶ್ ಪೂಜಾರಿ, ಕೋಟಿ ಪೂಜಾರಿ,ಕೋಟ ಮೂರ್ತೇದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕೆಮ್ಮಣ್ಣು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ನಿವಾಸ ಪೂಜಾರಿ (ಶ್ರೀ ಸಿದ್ದಿ)ವಹಿಸಿದರು. ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ.ಕೆ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಪುಷ್ಭ ಕೆ ಹಂದಟ್ಟು ವಂದಿಸಿದರು.