ಡೈಲಿ ವಾರ್ತೆ:30 ಜೂನ್ 2023

ಕೆಆರ್‌ಪುರಂ ಬಂಧಿತ ತಹಶೀಲ್ದಾರ್‌ ಅಜಿತ್‌ ರೈ ಮನೆಯಲ್ಲಿರುವ ವಾಚ್‌ ನೋಡಿ ದಂಗಾದ ಲೋಕಾಯುಕ್ತ ಅಧಿಕಾರಿಗಳು

ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೆಆರ್‌ಪುರಂ ತಹಶೀಲ್ದಾರ್‌ ಅಜಿತ್‌ ರೈ ಮನೆಯಲ್ಲಿರುವ ವಾಚ್‌ಗಳನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದಾರೆ.

ಅಜಿತ್ ರೈ ಬಳಿ ಮೂರು Rado ವಾಚ್‌ ಪತ್ತೆಯಾಗಿದೆ. ಈ ಮೂರು ವಾಚ್ ಗಳ ಬೆಲೆ 5 ಲಕ್ಷ ರೂ.ಗೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ. ದಾಳಿ ವೇಳೆ ಸಿಕ್ಕ ಅಷ್ಟೂ ವಾಚ್ ಗಳ ಬೆಲೆ ಬರೋಬ್ಬರಿ ಹತ್ತು ಲಕ್ಷ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದೆ.

ತಪಾಸಣೆಯ ಬೇಳೆ ಅಜಿತ್ ರೈ ಬ್ರಾಂಡ್ ಲೋಗೋ ಸೀಕ್ರೇಟ್ ರಿವೀಲ್ ಆಗಿದೆ. ASR ಹೆಸರಿನಲ್ಲಿ ಅಜಿತ್ ರೈ ಅಫಿಶಿಯಲ್ ಲೋಗೋ ತಯಾರಿಸಿದ್ದರು. ಎಎಸ್‌ಆರ್‌ ಎಂದರೆ ಅಜಿತ್‌ ಸೌಮ್ಯಾ ರೈ. ತನ್ನ ಹೆಸರಿನ ಜೊತೆ ಪತ್ನಿ ಸೌಮ್ಯ ಹೆಸರನ್ನು ಸೇರಿಸಿ ಅಜಿತ್ ರೈ ಲೋಗೋ ವಿನ್ಯಾಸ ಮಾಡಿದ್ದರು.

ತನ್ನ ಬೈಕ್, ಕಾರ್ ಹಾಗೂ ಇತರೇ ವಸ್ತುಗಳಿಗೆ ವಿಶೇಷವಾಗಿ ಅಜಿತ್‌ ರೈ ಲೋಗೋ ಡಿಸೈನ್ ಮಾಡಿ ಅಂಟಿಸುತ್ತಿದ್ದರು. ಆಡಿ, ಬೆನ್ಜ್ ಕಾರುಗಳ ಲೋಗೋ ಮಾದರಿಯಲ್ಲಿ ವಿನ್ಯಾಸ ಮಾಡಿದ್ದನ್ನು ನೋಡಿ ಲೋಕಾ ಅಧಿಕಾರಿಗಳು ಶಾಕ್‌ ಆಗಿದ್ದಾರೆ

ಏನು ಪತ್ತೆಯಾಗಿದೆ?
➤ಸಹಕಾರನಗರದಲ್ಲಿ 50 ಲಕ್ಷದ ಲೀಸ್‍ನ ಮನೆಯಲ್ಲಿ ವಾಸ
➤ಗೆಳೆಯ ಗೌರವ್ ಹೆಸರಲ್ಲಿ ದೇವನಹಳ್ಳಿ ಬಳಿ 96 ಎಕರೆಯ ರೇಸ್ ಕ್ಲಬ್
➤ಸೋದರ ಅಶೀತ್ ರೈ ಹೆಸರಲ್ಲಿ ಬೇನಾಮಿ ಆಸ್ತಿ
➤ದೇವನಹಳ್ಳಿಯ ಮತ್ತೊಂದು ಕಡೆ 44 ಎಕರೆಯ ಫಾರ್ಮ್ ಹೌಸ್
➤ದೊಡ್ಡ ದೊಡ್ಡ ಕಂಪನಿಗಳಿಗೆ ಜಮೀನು ಕೊಡಿಸಿ ದುಡ್ಡು ಮಾಡ್ತಿದ್ದ ಅಜಿತ್ ರೈ
➤ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರದಲ್ಲಿ ನೂರಾರು ಎಕರೆ ಜಮೀನು ಇರಬಹುದು ಎಂಬ ಶಂಕೆ
➤ನೂರಾರು ಎಕರೆ ಜಮೀನು ಮೌಲ್ಯ 1000ಕೋಟಿಗೂ ಹೆಚ್ಚು ಎಂಬ ಅಂದಾಜು
➤ 1368 ಸೀರಿಸ್‍ನ ಐಷಾರಾಮಿ ಕಾರುಗಳು, ಬೈಕ್‍ಗಳು
➤4 ಫಾರ್ಚೂನರ್, 4 ಥಾರ್, 3 ಐಷಾರಾಮಿ ಬೈಕ್
➤ ಅಜಿತ್ ರೈ ಬಳಿಯ ವಾಹನಗಳ ಮೌಲ್ಯ ಐದು ಕೋಟಿ