ಡೈಲಿ ವಾರ್ತೆ: 30 ಜೂನ್ 2023
ನಿವೃತ್ತ ಯೋಧ ಪಾರಂಪಳ್ಳಿ ಗಣೇಶ್ ಅಡಿಗ ಇವರಿಗೆ ಪಂಚವರ್ಣ ರಜತ ಗೌರವ ಪ್ರದಾನ
ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ಬೆಳ್ಳಿ ಹಬ್ಬದ ವರ್ಷಾಚರಣೆಯ ಅಂಗವಾಗಿ ಸಾಧಕರಿಗೆ ರಜತ ಗೌರವಾರ್ಪಣೆ ನೀಡುತ್ತಿದ್ದು ಈ ಹಿನ್ನಲ್ಲೆಯಲ್ಲಿ ಈ ತಿಂಗಳು ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಸಾಲಿಗ್ರಾಮದ ಪಾರಂಪಳ್ಳಿ ಗಣೇಶ್ ಅಡಿಗ ಇವರಿ ಗುರುವಾರ ರಜತ ಗೌರವ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಮಾಜಿ ಧರ್ಮದರ್ಶಿ ಸದಾರಾಮ ಹೆರ್ಳೇ ದೇಶದ ಭದ್ರತೆಯಲ್ಲಿ ಯೋಧರ ಪಾತ್ರ ಗಣನೀಯವಾದದ್ದು ಈ ನಿಟ್ಟಿನಲ್ಲಿ ಸಾಕಷ್ಟು ವರ್ಷ ದೇಶ ಸೇವೆಗೆ ತನ್ನ ಸರ್ವಸ್ವವನ್ನೂ ಮುಡಿಪಿಟ್ಟ ಸೈನಿಕರಿಗೆ ನೀಡುವ ಗೌರವ ಎಲ್ಲವುದಕ್ಕಿಂತ ಮಿಗಿಲಾದದ್ದು,ಸರಕಾರ ಮತ್ತು ಸೈನ್ಯ ಮಧ್ಯೆ ಸ್ನೇಹ ಸಂಬಂಧ ಗಟ್ಟಿಯಾದರೆ ದೇಶ ಮತ್ತಷ್ಟು ಸುಭದ್ರವಾಗಿರಲು ಸಾಧ್ಯ ಈ ದಿಸೆಯಲ್ಲಿ ಸೈನ್ಯ ಹಾಗೂ ಭದ್ರತೆಯ ವಿಚಾರದಲ್ಲಿ ಪ್ರಧಾನಿ ಗಟ್ಟಿ ನಿಲುವು ಹೊಂದಿದ್ದಾರೆ.
ದೇಶದ ಬೆನ್ನೆಲುಬಾಗಿ ರೈತ ಹೇಗೆ ಕಾಪಾಡುತ್ತಾನೊ ಅದೇ ರೀತಿ ಸೈನಿಕರು ಸಹ ಅಷ್ಟೆ ಗಮನಾರ್ಹ ಪಾತ್ರ ಪಾತ್ರ ವಹಿಸುತ್ತಾರೆ,ಅದೇ ರೀತಿಯಲ್ಲಿ ನಿರಂತ 31ವರ್ಷಗಳ ಕಾಲ ಸೈನ್ಯದ ಮೂರು ವಿಭಾಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಗಣೇಶ್ ಅಡಿಗರಿಗೆ ಸ್ವಗೃಹದಲ್ಲಿ ಗೌರವಿಸುವ ಪಂಚವರ್ಣ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ.ಯುವ ಸಮುದಾಯಕ್ಕೆ ಅಗ್ನಿಪಥ್ ಸೇರಿದಂತೆ ಅವರಿಗೆ ಸಾಕಷ್ಟು ಮಾಹಿತಿ ನೀಡುವ ಅಡಿಗರ ದೇಶ ಸೇವೆಯ ಕೆಚ್ಚು ಮಾದರಿ ವ್ಯಕ್ತಿತ್ವವನ್ನು ತೋರ್ಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಪಂಚವರ್ಣ ಸಂಸ್ಥೆಯ ಅಧ್ಯಕ್ಷ ಅಜಿತ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಾಲಿಗ್ರಾಮ ಪ.ಪಂ ಉಪಾಧ್ಯಕ್ಷೆ ಅನುಸೂಯ ಹೆರ್ಳೇ, ,ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಪ್ರದಾನ ಅರ್ಚಕ ಜನಾರ್ದನ ಅಡಿಗ,ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಪಿ.ನರಸಿಂಹ ಐತಾಳ್, ಯುವ ಕೂಟ ಮಹಾಜಗತ್ತು ಅಂಗಸಂಸ್ಥೆ ಗೌರವಾಧ್ಯಕ್ಷ ಪಿ.ವೈ ಕೃಷ್ಣಪ್ರಸಾದ್ ಹೆರ್ಳೇ, ಅಧ್ಯಕ್ಷ ಗಿರೀಶ್ ಮಯ್ಯ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಾಣ ಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಶಕೀಲ ಪೂಜಾರಿ ಸ್ವಾಗತಿಸಿದರೆ,ಸಾಂಸ್ಕೃತಿಕ ಕಾರ್ಯದರ್ಶಿ ವನಿತಾ ಉಪಾಧ್ಯ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ನಿರೂಪಿಸಿದರೆ , ಸಂಚಾಲಕಿ ಪುಷ್ಭಾ ಕೆ ಹಂದಟ್ಟು ವಂದಿಸಿದರು. ಪಂಚವರ್ಣ ಸಂಸ್ಥೆಯ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.
ನನಗೆ ನನ್ನ ಗೃಹಕ್ಕೆ ಬಂದು ಗೌರವಿಸಿದ ಪಂಚವರ್ಣ ಸಂಸ್ಥೆಯ ಗೌರವ ಇಡೀ ದೇಶ ಕಾಯುವ ಸೈನಿಕರಿಗೆ ನೀಡಿದ ಅಭಿಮಾನದ ಗೌರವವಾಗಿದೆ, ಸೇನೆಯಲ್ಲಿ ಸಾಕಷ್ಟು ಮಜಲುಗಳನ್ನು ಕ್ರಮಿಸಿದ್ದೇನೆ, ಅದೊಂದು ಹೆಮ್ಮೆಯ ಕಾರ್ಯವಾಗಿದೆ ಎಂಬ ಹಮ್ಮು ನನ್ನಲಿದೆ ಅದು ಪ್ರತಿಯೊಬ್ಬರಲ್ಲೂ ಹುಟ್ಟಬೇಕು,ಇಸ್ರೇಲ್ ಮಾದರಿಯಲ್ಲಿ ಪ್ರತಿಯೊರ್ವರು ಸೈನ್ಯದಲ್ಲಿ ಪಳಗುವಂತ್ತಾಗಬೇಕು ಆಗ ದೇಶ ಸುಭದ್ರವಾಗಿರುತ್ತದೆ, ತಮ್ಮ ಆತ್ಮ ರಕ್ಷಣೆ ಹೊಂದುತ್ತದೆ.ಯುವ ಸಮುದಾಯ ದೇಶದ ಬಗ್ಗೆ ಅದರ ಭದ್ರತೆಯ ಬಗ್ಗೆ ಕಾಳಜಿ ವಹಿಸಬೇಕು,ದೇಶಾಭಿಮಾನದ ಪರಂಪರೆ ಪ್ರತಿಯೊರ್ವರ ರಕ್ತದಲ್ಲಿ ನಿತ್ಯ ನಿರಂತರವಾಗಿ ಹರಿಯುತ್ತಿರಬೇಕು
ಸನ್ಮಾನಿತರು- ಗಣೇಶ್ ಅಡಿಗ ನಿವೃತ್ತ ಯೋಧರು ಪಾರಂಪಳ್ಳಿ