ಡೈಲಿವಾರ್ತೆ:11/ಮಾರ್ಚ್/2026

ಜನತಾ ಸಂಸ್ಥೆಯಲ್ಲಿ 55ನೇ ರಾಷ್ಟ್ರೀಯ ಸುರಕ್ಷತಾ ವಾರ ಸಮಾರೋಪ

ಕೋಟ: ಜನತಾ ಸಂಸ್ಥೆಯ ವತಿಯಿಂದ 55ನೇ ರಾಷ್ಟ್ರೀಯ ಸುರಕ್ಷತಾ ವಾರ ಹಾಗೂ ಸಂಸ್ಥೆಯ ನಾಲ್ಕನೇ ವರ್ಷದ ಸುರಕ್ಷತಾ ವಾರ ಜಾಗ್ರತಿ 2026 ಸಮಾರೋಪ ಸಮಾರಂಭವು ಸಂಸ್ಥೆಯ ಆವರಣದಲ್ಲಿ 10ನೇ ಮಾರ್ಚ ಮಂಗಳವಾರ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯಸ್ಥರಾದ ಆನಂದ ಸಿ. ಕುಂದರ್ ದೀಪ ಪ್ರಜ್ವಲನೆ ನಡೆಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ಅವರು ‘ಸುರಕ್ಷತೆ ಎಂಬುದು ಕೇವಲ ನಿಯಮವಲ್ಲ, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿರಬೇಕು ಎಂದು ಹೇಳಿದರು. ಕೆಲಸ ಮಾಡುವ ಸ್ಥಳದಲ್ಲಿ ಎಚ್ಚರಿಕೆ ಮತ್ತು ಜಾಗೃತಿಯಿಂದ ನಡೆದುಕೊಂಡರೆ ಅನೇಕ ಅಪಘಾತಗಳನ್ನು ತಪ್ಪಿಸಬಹುದು ಎಂದು ಅವರು ಸಲಹೆ ನೀಡಿದರು’.

ಸಂಸ್ಥೆಯ ಎಜಿಎಂ ಶ್ರೀನಿವಾಸ ಕುಂದರ್ ಕಾರ್ಯಕ್ರಮದ ಪ್ರಸ್ತಾವನೆ ಮಾಡುತ್ತಾ ಸುರಕ್ಷತಾ ವಾರದ ಮಹತ್ವವನ್ನು ವಿವರಿಸಿದರು. ನಂತರ ಸಂಸ್ಥೆಯ ಸಿಬ್ಬಂದಿ ಮಹೇಶ್ ನಾಯರಿ ಪ್ರಾರ್ಥನೆ ನಡೆಸಿದರು

ಸುರಕ್ಷತಾ ವಾರದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಪಘಾತದಿಂದ ಪಾರಾದ ಸಿಬ್ಬಂದಿಗಳ ಅನುಭವಗಳು, ಅಗ್ನಿ ಅವಘಡದ ಸಂದರ್ಭದಲ್ಲಿನ ಪ್ರತಿಕ್ರಿಯೆ ಹಾಗೂ ಸಂಸ್ಥೆಯೊಳಗೆ ನಡೆದ ಅಣಕು ತುರ್ತು ಕಾರ್ಯಾಚರಣೆ (ಮಾಕ್ ಡ್ರಿಲ್) ಕುರಿತ ವಿಡಿಯೋಗಳನ್ನು ಪ್ರದರ್ಶಿಸಲಾಯಿತು.

ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಕುಂದರ್, ರಕ್ಷಿತ್ ಕುಂದರ್, ಸದಸ್ಯರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷಿತ್ ಕುಂದರ್, ಸಿಇಒ ಡಾ. ಧನೇಶ್ ಜಿವಾನಿ, ಸಿಎಫ್ಒ ಅಶ್ವತ್ ಜೆ. ಶೆಟ್ಟಿ, ಉಪಸ್ಥಿತರಿದ್ದರು. ಫ್ಯಾಕ್ಟರಿ ಮ್ಯಾನೇಜರ್ ಮಿಥುನ್ ಕುಮಾರ್, ಎಚ್‌ಆರ್ ಶಿಲ್ಪಾ ಸಹಕರಿಸದರು

ಕಾರ್ಯಕ್ರಮದ ಅಂತ್ಯದಲ್ಲಿ ಸುರಕ್ಷತಾ ಅಧಿಕಾರಿ ಕಾರ್ತಿಕ್ ಆಚಾರ್ಯ ಧನ್ಯವಾದ ಸಲ್ಲಿಸಿ
ಸಂಸ್ಥೆಯ ಸಮಾಜ ಸೇವಾ ವಿಭಾಗದ ರವಿಕಿರಣ ಕೋಟ ಮತ್ತು ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು
ಸಮಾರಂಭದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.