ಡೈಲಿ ವಾರ್ತೆ:01 ಜುಲೈ 2023
ಬಾರ್ಕೂರು – ಹೇರಾಡಿ ಶ್ರೀ ವಿದ್ಯೇಶ ವಿದ್ಯಾಮಾನ್ಯನೇಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ
ಬ್ರಹ್ಮಾವರ: ಶ್ರೀ ವಿದ್ಯೇಶ ವಿದ್ಯಾಮಾನ್ಯನೇಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹೇರಾಡಿ -ಬಾರ್ಕೂರು ಇದರ ಆಶ್ರಯದಲ್ಲಿ ಶಾಲೆಯ ವಿದ್ಯಾರ್ಥಿ ಸಂಘ ಮತ್ತು ಶಾಲೆಯ ವಿವಿಧ ಸಂಘ ಗಳ ಉದ್ಘಾಟನಾ ಕಾರ್ಯಕ್ರಮವು ದಿನಾಂಕ ಜುಲೈ 1 ರಂದು ಶಾಲೆಯಲ್ಲಿ ನೆರವೇರಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಸ್ಥರಾಗಿರುವ ಶ್ರೀಮತಿ ಲಿಖಿತಾ ಕೊಠಾರಿ ರವರು ವಹಿಸಿದ್ದರು.
ಶಾಲಾ ಮುಖಂಡನಾಗಿ ಕಾರ್ತಿಕ್, ಉಪಾಧ್ಯಕ್ಷನಾಗಿ ಪ್ರತಿಕ್ , ಕ್ರೀಡಾ ಕಾರ್ಯದರ್ಶಿಯಾಗಿ ಶರಣ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚಿಂತನ್, ಆರೋಗ್ಯ ಮಂತ್ರಿಯಾಗಿ ವರ್ಷ, ಸಂಸತ್ತು ನ ಸ್ಪೀಕರ್ ರಾಗಿ ಜನ್ಸಿತ, ವಿರೋಧ ಪಕ್ಷ ದ ನಾಯಕಿ ಯಾಗಿ ಅಮೃತ, ರವರಿಗೆ ಶಾಲೆಯ ಮುಖ್ಯಸ್ಥ ರಾದ ಶ್ರೀಮತಿ ಲಿಖಿತ ಕೊಠಾರಿ ರವರು ಅಧಿಕಾರವಹಿಸಿ, ಪ್ರಮಾಣ ವಚನ ಬೋಧಿಸಿ, “ಗ್ರೇಟ್ ಲೀಡರ್ ಆದವರು ಇನ್ನೊಬ್ಬರಿಗೆ ಸ್ಪೂರ್ತಿಯಾಗಿ ಉತ್ತಮ ಕೆಲಸ ನಿರ್ವಹಿಸುತ್ತಾರೆ. ನೀವು ಎಲ್ಲರಿಗೂ ಸ್ಫೂರ್ತಿ ಯಾಗಿ ಕೆಲಸ ನಿರ್ವಹಿಸಿ ” ಅಂತ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸ್ಕೌಟ್ಸ್ ಲೀಡರ್ ಆಗಿ ಗೌತಮ್, ಗೈಡ್ಸ್ ಲೀಡರ್ ಆಗಿ ಶ್ರೀ ಲಕ್ಷ್ಮಿ, ಹೈಸ್ಕೂಲ್ ವಿಭಾಗದ ಸಾಹಿತ್ಯ ಸಂಘ ದ ಅಧ್ಯಕ್ಷರಾಗಿ ಧನ್ಯ, ಇಕೋ ಕ್ಲಬ್ ನ ಅಧ್ಯಕ್ಷರಾಗಿ ಆಕಾಶ್, ಗ್ರಾಹಕರ ಕ್ಲಬ್ ನ ಅಧ್ಯಕ್ಷರಾಗಿ ಅಮೃತ, ರೆಡ್ ಕ್ರಾಸ್ ಕ್ಲಬ್ ನ ಅಧ್ಯಕ್ಷರಾಗಿ ದಿಗಂತ್, ಮ್ಯಾತ್ಸ್ ಕ್ಲಬ್ ನ ಅಧ್ಯಕ್ಷ ರಾಗಿ ಅನ್ವಿತಾ, ಸೈನ್ಸ್ ಕ್ಲಬ್ ನ ಅಧ್ಯಕ್ಷ ರಾಗಿ ಶ್ರೀಕಾ ಪ್ರಾಥಮಿಕ ವಿಭಾಗ ದ ಇಕೋ ಕ್ಲಬ್ ನ ಅಧ್ಯಕ್ಷ ರಾಗಿ ಅನ್ವೇಷಾ ಸಾಹಿತ್ಯ ಸಂಘ ದ ಅಧ್ಯಕ್ಷ ರಾಗಿ ಯಕ್ಷಿತಾ ಸೈನ್ಸ್ ಕ್ಲಬ್ ನ ಅಧ್ಯಕ್ಷ ರಾಗಿ ಮನಸ್ವಿ, ಮಾಥ್ಸ್ ಕ್ಲಬ್ ನ ಅಧ್ಯಕ್ಷ ರಾಗಿ ಪ್ರತಿಜ್ಞಾ ರವರಿಗೆ ಅಧಿಕಾರ ವಹಿಸಲಾಯಿತು. ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಸುಜಾತಾ ಎಲ್. ರೈ ರವರು ವಿದ್ಯಾರ್ಥಿ ಗಳಿಗೆ “ಇರುವೆ ಯಂತೆ ಶಿಸ್ತು, ಜೇನು ನೊಣದಂತೆ ಕರ್ತವ್ಯ ನಿಷ್ಠೆ ಯನ್ನು ನಿಮ್ಮ ವಿದ್ಯಾರ್ಥಿ ಜೇವನದಲ್ಲೂ ಅಳವಡಿಸಿ ಕೊಳ್ಳಿ ಅಂತ ಹಿತವಚನದ ಮಾತು ಆಡಿದರು.
ಈ ಕಾರ್ಯಕ್ರಮ ದ ಪ್ರಾರ್ಥನೆ ಯನ್ನು ಮಾನ್ವಿತಾ, ಆಯಿಷಾ ಅನ್ಸಿಯ, ಧನ್ಯ, ಶ್ರೀಕಾ ನೆರವೇರಿಸಿದರು, ಈ ಉದ್ಘಾಟನೆ ಕಾರ್ಯಕ್ರಮ ವನ್ನು ಹಿಮಾನಿ ನಿರೂಪಿಸಿ, ಅನ್ವಿತಾ ಸ್ವಾಗತಿಸಿ, ಅಪ್ರಮೇಯ ಭಟ್ ವಂದಿಸಿದರು, ಈ ಕಾರ್ಯಕ್ರಮವನ್ನು ಶ್ರೀಮತಿ ಜ್ಯೋತಿ ಶೆಟ್ಟಿ ಮತ್ತು ಶ್ರೀಮತಿ ನಾಗರತ್ನ ಹೆಬ್ಬಾರ್ ರವರು ಸಂಯೋಜನೆ ಮಾಡಿದರು, ಶಾಲೆಯ ಶಿಕ್ಷಕ – ಶಿಕ್ಷೇತರರು ಸಹಕರಿಸಿದರು.