



ಡೈಲಿ ವಾರ್ತೆ:5 ಜುಲೈ 2023


ಕಟಪಾಡಿ: ಕೃತಕ ನೆರೆಯಿಂದ ಹಲವಡೆ ಮನೆಗೆ ನುಗ್ಗಿದ ನೀರು
ಕಟಪಾಡಿ : ಉದ್ಯಾವರ ಸಂಪಿಗೆ ನಗರದ ಬಳಿ ಕೃತಕ ನೆರೆಯಿಂದ ಮನೆಯೊಳಕ್ಕೆ ನೀರು ನುಗ್ಗಿದೆ.
ಸ್ಥಳೀಯವಾಗಿ ನೀರು ಹರಿಯುವ ತೋಡು ಮುಚ್ಚಿರುವ ಕಾರಣದಿಂದ ಅಲ್ವಾ ಕಂಪೌಂಡ್ ಬಳಿಯ ಕೃಷ್ಣ ಪೂಜಾರಿ ಎಂಬವರ ಮನೆಯೊಳಕ್ಕೆ ನೀರು ನುಗ್ಗಿದ್ದು ಕೆಲ ಮನೆಗಳ ಅಂಗಳದಲ್ಲಿ ನೀರು ಹರಿಯುತ್ತಿದೆ.
ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸುವ್ಯವ ಸ್ಥೆ ಕಲ್ಪಿಸುವಂತೆ ಮನೆ ಮಂದಿ ಆಗ್ರಹಿಸುತ್ತಿದ್ದಾರೆ.