



ಡೈಲಿ ವಾರ್ತೆ: 5 ಜುಲೈ 2023


ಬಜ್ಪೆ:ಬಾರಿ ಗಾಳಿ ಮಳೆಗೆ ಉರುಳಿದ ಬೃಹತ್ ಗಾತ್ರದ ಮರ- ಜಖಂ ಗೊಂಡ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ವಾಹನಗಳು
ಮಂಗಳೂರು: ಬೃಹತ್ ಮರವೊಂದು ವಾಹನಗಳ ಮೇಲೆ ಬಿದ್ದು ಹಾನಿ ಉಂಟಾದ ಘಟನೆ ಬಜ್ಪೆ ವಿಮಾನ ನಿಲ್ದಾಣದ ವಾಹನ ನಿಲುಗಡೆ ಸ್ಥಳದಲ್ಲಿ ನಡೆದಿದೆ.
ಬಜ್ಪೆ ವಿಮಾನ ನಿಲ್ದಾಣದ ವಾಹನ ನಿಲುಗಡೆ ಜಾಗದಲ್ಲಿದ್ದ ಮರವೊಂದು ಗಾಳಿ ಮಳೆಗೆ ಉರುಳಿ ಬಿದ್ದು, ಪಾರ್ಕಿಂಗ್ ಮಾಡಿದ್ದ ಬೈಕ್, ಸ್ಕೂಟರ್‌ಗಳ ಮೇಲೆ ಬಿದ್ದಿದೆ. ಇದರಿಂದ ವಾಹನಗಳು ಜಖಂಗೊಂಡಿದೆ.
ಮಂಗಳವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದ ಮುಂಜಾನೆಯ ವೇಳೆಗೆ ಮರ ಉರುಳಿಬಿದ್ದಿದ್ದು. ವಿಮಾನ ನಿಲ್ದಾಣದ ಸಿಬ್ಬಂದಿಗಳ ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ನಷ್ಟವುಂಟಾಗಿದೆ ಎಂದು ತಿಳಿದು ಬಂದಿದೆ.