



ಡೈಲಿ ವಾರ್ತೆ:06 ಜುಲೈ 2023


ಉತ್ತರ ಕನ್ನಡದಲ್ಲಿ ನಿರಂತರ ಮಳೆ: ಶಾಲಾ, ಕಾಲೇಜ್ ಗೆ ರಜೆ ಮುಂದುವರಿಕೆ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ತೀವ್ರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಜು.6ರ ಗುರುವಾರ ರಜೆ ಮುಂದುವರಿಸಲಾಗಿದೆ. ರಜೆಯ ನಿರ್ಧಾರವನ್ನು ಜಿಲ್ಲಾಡಳಿತ ಬೆಳಿಗ್ಗೆ ಪ್ರಕಟಿಸಿದೆ.
1 ರಿಂದ 12 ತರಗತಿವರೆಗೆ ಎಲ್ಲಾ ಶಾಲೆ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ.
ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರದಲ್ಲಿ ಮಳೆ ಮುಂದುವರಿದಿದೆ. ಆಗಾಗ ರಭಸದ ಮಳೆ ಬೀಳುತ್ತಿದೆ. ಪ್ರಕೃತಿ ವಿಕೋಪ ನಿರ್ವಹಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.