



ಡೈಲಿ ವಾರ್ತೆ:06 ಜುಲೈ 2023


ಉಪ್ಪಿನಂಗಡಿ ಯುವಕನೋರ್ವ
ದುಬೈನಲ್ಲಿ ಅನುಮಾನಾಸ್ಪದವಾಗಿ ಸಾವು.!
ದುಬೈ;ಉಪ್ಪಿನಂಗಡಿ ನಿವಾಸಿ ಯುವಕನೋರ್ವ ದುಬೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕುಪ್ಪೆಟ್ಟಿ ನಿವಾಸಿ ಯುವಕ ರಾಝಿಕ್ ಕುಪ್ಪೆಟ್ಟಿ( 24) ಮೃತ ಯುವಕ.
ವಿವಾಹಿತನಾಗಿರುವ ರಾಝಿಕ್ ಕಳೆದ ಬಾರಿ ದುಬೈನಿಂದ ಬಂದು ವಿವಾಹವಾಗಿ ಮತ್ತೆ ಉದ್ಯೋಗದ ನಿಮಿತ್ತ ದುಬೈಗೆ ತೆರಳಿದ್ದರು. ಇವರಿಗೆ ಪುಟ್ಟ ಮಗು ಕೂಡ ಇದೆ ಎನ್ನಲಾಗಿದೆ.
ಯುವಕನ ನಿಧನಕ್ಕೆ ನಿಖರ ಕಾರಣ ತಿಳಿದು ಬರಬೇಕಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.