ಡೈಲಿ ವಾರ್ತೆ:06 ಜುಲೈ 2023

ಕೆ. ಸಂತೋಷ್ ಶೆಟ್ಟಿ ಮೊಳಹಳ್ಳ

“ಮೊಳಹಳ್ಳಿ-ಮಾಸ್ತಿಕಟ್ಟೆ: ಎರಡು ಕಾರುಗಳು ಮುಖಾಮುಖಿ ಡಿಕ್ಕಿ: ಕಾರುಗಳ ಮುಂಭಾಗ ಜಖಂ, ಪ್ರಯಾಣಿಕರು ಪಾರು.!

ಕುಂದಾಪುರ: ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣ್ಸೆಮಕ್ಕಿ ಸಂಪರ್ಕ ಕಲ್ಪಿಸುವ ಮಾಸ್ತಿಕಟ್ಟೆ ಸರ್ಕಲ್ ಬಳಿ ಎರಡು ಕಾರುಗಳು ಮುಖ ಮುಖಿಯಾಗಿ ಪ್ರಯಾಣಿಕರು ಪಾರಾದ ಘಟನೆ ಜು. 6 ರಂದು ಗುರುವಾರ ಇಂದು ಬೆಳಿಗ್ಗೆ ನಡೆದಿದೆ.

ಹುಣಸೆ ಮಕ್ಕಿಯಿಂದ ಮರತೂರಿನ ಕಡೆಗೆ ಸಾಗುತ್ತಿರುವ ಕಾರು ಒಂದೆಡೆಯಾದರೆ, ವೇಗವಾಗಿ ಮರತೂರು ಕಡೆಯಿಂದ ಹುಣಸೆಮಕ್ಕಿ ಕಡೆಗೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಬ್ರಿಝ ಕಾರು ಮರತೂರು ಹರೀಶ್, ಕಾಂಟ್ರಾಕ್ಟರ್ ಎನ್ನುವರಿಗೆ ಸೇರಿದ್ದು ಎನ್ನಲಾಗಿದೆ.


ಎರಡು ಕಾರುಗಳ ಮುಂಭಾಗ ತೀವ್ರ ತರದ ಹಾನಿಯಾಗಿದೆ. ಘಟನೆ ಸಂಬಂಧ ಸ್ಥಳೀಯ ಅಕ್ಕಪಕ್ಕದವರು ಆಗಮಿಸಿ ಸಹಾಯಕ್ಕೆ ನಿಂತರು. ಅದೃಷ್ಟವಶಾತ್ ಪ್ರಯಾಣಿಕರಿಗೆ, ಚಾಲಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.
ಮೊಳಹಳ್ಳಿ- ಹುಣಸೆಮಕ್ಕಿ- ಕೈಲಕೆರೆ – ಹಣೆಯಾಡಿ ಮನೆ ಮಾರ್ಗ , ಬಿದ್ಕಲ್ ಕಟ್ಟೆ ಸಂಪರ್ಕ ಕಲ್ಪಿಸುವ ಜಂಕ್ಷನ್ ಮಾಸ್ತಿ ಕಟ್ಟೆ ಆದ್ದರಿಂದ ತೀವ್ರಗತಿಯ ವಾಹನಗಳು ವೇಗದಿಂದ ಬರುವುದರಿಂದ ಯಾವುದೇ ರೀತಿಯ ಸೂಚನೆ ಫಲಕ ಇಲ್ಲದೆ ಇರುವುದು ಘಟನೆಗೆ ಕಾರಣವಾಗಿದೆ. ಇನ್ನಾದರೂ ಸ್ಥಳೀಯ ಗ್ರಾಮ ಪಂಚಾಯತ್ ಗಮನಹರಿಸಿ ಜಂಕ್ಷನ್ ಗಳಲ್ಲಿ ಸೂಚನಾ ಫಲಕವನ್ನ ಅಳವಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.