ಡೈಲಿ ವಾರ್ತೆ:08 ಜುಲೈ 2023

ಉಡುಪಿ:ಮಹಿಳೆ ನಾಪತ್ತೆ!

ಉಡುಪಿ:ತಾಲೂಕಿನ ಬಡಗುಬೆಟ್ಟು ಗ್ರಾಮದ ಇಂದಿರಾನಗರದಲ್ಲಿ ಪತಿ ಇಮ್ರಾನ್ ಖಾನ್ ಅವರೊಂದಿಗೆ ವಾಸ್ತವ್ಯವಿರುವ ರಿಜ್ವಾನಾ (25) ಇವರ ತಾಯಿ ಶ್ರೀಮತಿ ಬೀಬಿಜಾನ್‌ (57) ಎಂಬವರು ಜುಲೈ 7 ರಂದು ಬೆಳಿಗ್ಗೆ 11:45 ಸಮಯದಲ್ಲಿ ಕ್ಷುಲ್ಲಕ ವಿಚಾರಕ್ಕೆ ರಿಜ್ವಾನಾ ಅವರೊಂದಿಗೆ
ಸಿಟ್ಟು ಮಾಡಿಕೊಂಡು ಮನೆ ಬಿಟ್ಟು ಹೋದವರು ಈವರೆಗೂ ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುವುದಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.