ಡೈಲಿ ವಾರ್ತೆ:13 ಜುಲೈ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಯಕ್ಷಗಾನ ಕಲಾವಿದ ವಿಠೋಬ ಹಮ್ಮಣ್ಣ ನಾಯಕ ನಿಧನ


ಅಂಕೋಲಾ : ತಾಲೂಕಿನ ವಂದಿಗೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಯಕ್ಷ ಗಾನ ಕಲಾವಿದ ವಿಠೋಬ ಹಮ್ಮಣ್ಣ ನಾಯಕ (88) ಅವರು ತಮ್ಮ ಸ್ವಗೃಹದಲ್ಲಿ ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಮೃತರು ರಾವಣ, ದುಷ್ಟಬುದ್ಧಿ, ಬೀಮ, ಯಮ, ಘಟೋದ್ಗಜ್, ಹನುಮಂತ, ಶಬರ ಸೇರಿದಂತೆ ಹಲ ವಾರು ಯಕ್ಷಗಾನ ಮೇಳದಲ್ಲಿ ಅಭಿನಯಿಸಿದ್ದಾರೆ. ಯಕ್ಷಗಾನ ಕಲೆಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ ಸಂದಿದೆ.
ಮೃತರಿಗೆ ಪತ್ನಿ, ಮೂವರು ಗಂಡು ಮತ್ತು ಓರ್ವ ಪುತ್ರಿ ಇದ್ದಾರೆ.

ಸಂತಾಪ ಸೂಚನೆ: ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್.ವಾಸರೆ, ತಾಲೂಕಾ ಅಧ್ಯಕ್ಷ ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ), ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಹೇಶ ನಾಯಕ ಹಿಚ್ಕಡ, ಯಕ್ಷಗಾನ ಕಲಾವಿದ ಡಾ.ಆರ್.ಜಿ.ಗುಂದಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರೀ, ಉಪನ್ಯಾಸಕ ಉಲ್ಲಾಸ ಹುದ್ದಾರ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.