
ಡೈಲಿ ವಾರ್ತೆ: 13 ಜುಲೈ 2023
ವರದಿ: ಅದ್ದಿ ಬೊಳ್ಳೂರು
ಹಳೆಯಂಗಡಿ ಆಟೋರಿಕ್ಷಾ ಚಾಲಕ-ಮಾಲಕರ ಸಂಘದ ಮಹಾಸಭೆ – ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಎಸ್ ಆಯ್ಕೆ.
ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಹಳೆಯಂಗಡಿ ಇದರ ವಾರ್ಷಿಕ ಮಹಾಸಭೆಯು ಸೋಮವಾರ ಹಳೆಯಂಗಡಿಯ ರಾಮಾನುಗ್ರಹ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ನಡೆದ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ 2023-24 ನೇ ನೂತನ ಸಾಲಿನ ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಎಸ್’ ಗೌರವಾಧ್ಯಕ್ಷರಾಗಿ ಶಶೀಂದ್ರ ಎಂ ಸಾಲ್ಯಾನ್’ ಸರ್ವಾನುಮತದಿಂದ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಅಶ್ರಫ್ ಪಡುತೋಟ ಪ್ರಧಾನ ಕಾರ್ಯದರ್ಶಿಯಾಗಿ ಹುಸೈನಬ್ಬ ಬೊಳ್ಳೂರು ಜೊತೆ ಕಾರ್ಯದರ್ಶಿಯಾಗಿ ನಾಗೇಶ್ ಬಂಗೇರ ಕೋಶಾಧಿಕಾರಿಯಾಗಿ ಸುರೇಶ್ ಬಂಗೇರ ಅಬ್ದುಲ್ ರೆಹಮಾನ್ ಕದಿಕೆ ಆಯ್ಕೆಯಾದರು.
ಸಂಘಟನಾ ಕಾರ್ಯದರ್ಶಿಗಳಾಗಿ ನವೀನ್ ಸಾಲಿಯಾನ್ ಅಹಮದ್ ಭಾವಾ ಹಿಲಾಲ್ ಕದಿಕೆ ಹಾಗೂ ಲಕ್ಷ್ಮೀಶ ಆಯ್ಕೆಯಾದರು.

ಸಲಹಾ ಸಮಿತಿ ಸದಸ್ಯರಾಗಿ ವಸಂತ ಬೆರ್ನಾಡ್ ಅಝೀಝ್ ಐ ಎ ಕೆ, ಅರೀಶ್ ನವರಂಗ್ ಅಬ್ದುಲ್ ಖಾದರ್ ಗಂಗಾಧರ್ ಎಸ್ ಕೋಡಿ ಸೋಮನಾಥ್ ಕೋಟ್ಯಾನ್ ಹಾಗೂ ಶಂಕರ್ ಅಮೀನ್ ಆಯ್ಕೆ ಆಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ಪೂಜಾರಿ ಶಶಿಧರ್ ಅಝೀಝ್ ಇಂದಿರಾ ನಗರ ಅಬ್ದುಲ್ ರಹಿಮಾನ್ ಜಗದೀಶ್ ಶೆಟ್ಟಿ ಹನೀಫ್ ಕದಿಕೆ ಅಶ್ರಫ್ ಇಂದಿರಾನಗರ ವಸಂತ್ ಹೊಯ್ದೆಗುಡ್ಡೆ ರೋನಾಲ್ಡ್ ಕರ್ಕಡ ಫಿರೋಜ್, ಅಕ್ಷಿತ್ ಸಾಲ್ಯಾನ್ ಕೈಸರ್ ಕದಿಕೆ ಶರೀಫ್ ಸಾಗ್, ಲಕ್ಷ್ಮಣ್ ಶೆಟ್ಟಿ ಅಹಮದ್ ಭಾವ ಮದನಿ, ಶಬೀರ್ ಇಂದಿರಾನಗರ ಆಯ್ಕೆಯಾಗಿದ್ದಾರೆ.
ಸ್ಥಳೀಯ ಪಂಚಾಯತ್ ಸದಸ್ಯರಾದ ಎಮ್ ಎಂ.ಎ ಕಾದರ್ ಇಂದಿರಾ ನಗರ, ಅಬ್ದುಲ್ ಅಝೀಝ್ ಐ.ಎ.ಕೆ, ಹುಸೇನಬ್ಬ ಬೊಳ್ಳೂರು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.