ಡೈಲಿ ವಾರ್ತೆ:17 ಜುಲೈ 2023

ಮಾಣಿ : ಸೋಶಿಯಲ್ ಇಖ್ವಾ ಫೆಡರೇಶನ್ ಇದರ ನೂತನ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷರಾಗಿ ರಹೀಂ ಸುಲ್ತಾನ್ ಪುನರಾಯ್ಕೆ

ಬಂಟ್ವಾಳ : ಮಾಣಿ ಇಲ್ಲಿನ ಸೋಶಿಯಲ್ ಇಖ್ವಾ ಫೆಡರೇಶನ್ ನ ಮಹಾಸಭೆಯು ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂ ನೇರಳಕಟ್ಟೆಯಲ್ಲಿ ಭಾನುವಾರ ನಡೆಯಿತು.

2023-25 ನೇ ಸಾಲಿನ ಅಧ್ಯಕ್ಷರಾಗಿ ಅಬ್ದುಲ್‌ ರಹ್ಮಾನ್ ಕೊಡಾಜೆ (ಸುಲ್ತಾನ್) ಪುನರಾಯ್ಕೆ ಗೊಂಡರು. ಉಪಾಧ್ಯಕ್ಷರಾಗಿ ಸಲೀಂ‌ ಕೆ.ಬಿ., ಪ್ರಧಾನ ಕಾರ್ಯದರ್ಶಿಯಾಗಿ ಜೈನುಲ್‌ ಅಕ್ಬರ್ ಕಡೇಶ್ವಾಲ್ಯ ,ಜೊತೆ ಕಾರ್ಯದರ್ಶಿಯಾಗಿ ರಶೀದ್ ನೀರಪಾದೆ , ಕೋಶಾಧಿಕಾರಿಯಾಗಿ ರಿಯಾಝ್ ಕಲ್ಲಾಜೆ, ಶೈಕ್ಷಣಿಕ ಕಾರ್ಯದರ್ಶಿಯಾಗಿ ಲತೀಫ್ ಕೊಡಾಜೆ, ಆರೋಗ್ಯ ಕಾರ್ಯದರ್ಶಿಯಾಗಿ ಹನೀಫ್ ಸೂರಿಕುಮೇರ್, ಸಂಘಟನಾ ಕಾರ್ಯದರ್ಶಿಯಾಗಿ ಶಬೀರ್ ಕಡೇಶ್ವಾಲ್ಯ ಮತ್ತು ಮಾಧ್ಯಮ ಕಾರ್ಯದರ್ಶಿಯಾಗಿ ಇಂಜಿನಿಯರ್ ನವಾಝ್ ನೇರಳಕಟ್ಟೆ ಆಯ್ಕೆಯಾದರು.

ಪತ್ರಕರ್ತ ಬದ್ರುದ್ಧೀನ್ ಮಾಣಿ ಶಿಕ್ಷಣದ ಮಹತ್ವ ಮತ್ತು ಸಮುದಾಯ ಸಬಲೀಕರಣದ ಬಗ್ಗೆ ಮಾತನಾಡಿದರು. ಸಲಹಾ ಸಮಿತಿ ಸದಸ್ಯರಾದ ಹಾಜಿ ಉಮರ್ ರಾಜ್ ಕಮಲ್, ಹಾಜಿ ಮುಹಮ್ಮದ್ ರಫೀಕ್ ಹಾಗೂ ಹನೀಫ್ ಖಾನ್ ಕೊಡಾಜೆ ಉಪಸ್ಥಿತರಿದ್ಧರು.

ಇದೇ ವೇಳೆ ಇತ್ತೀಚೆಗೆ ಚಾರ್ಟೆಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಪೆರಾಜೆ ಗ್ರಾಮದ ಬುಡೋಳಿ ನಿವಾಸಿಗಳಾದ ಸಿರಾಜುದ್ಧೀನ್ ಮತ್ತು ಸಂಶುದ್ಧೀನ್ ಸಹೋದರರನ್ನು ಸನ್ಮಾನಿಸಲಾಯಿತು.

ಜೈನುಲ್ ಅಕ್ಬರ್ ಸಂಘಟನೆಯ ವಾರ್ಷಿಕ ವರದಿ ಮಂಡಿಸಿದರು. ರಶೀದ್ ನೀರಪಾದೆ ಲೆಕ್ಕಪತ್ರಗಳನ್ನು ಮಂಡಿಸಿದರು. ರಿಯಾಝ್ ಕಲ್ಲಾಜೆ‌ ಮತ್ತು ಗಫ್ಫೂರ್ ಬುಡೋಳಿ ಸಂಘಟನೆಯ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
ಅಝೀಝ್ ಗಡಿಯಾರ ಕಾರ್ಯಕ್ರಮ ನಿರೂಪಿಸಿದರು.