



ಡೈಲಿ ವಾರ್ತೆ: 29 ಜುಲೈ 2023


ಉಡುಪಿ ವೀಡಿಯೋ ಚಿತ್ರೀಕರಣ ಕೇಸ್ – ತನಿಖಾಧಿಕಾರಿ ಬದಲಾವಣೆ
ಉಡುಪಿ: ಖಾಸಗಿ ಕಾಲೇಜು ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿಯನ್ನು ಉಡುಪಿ ಎಸ್‌ಪಿ ಬದಲಾಯಿಸಿದ್ದಾರೆ.
ಮಲ್ಪೆ ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ್ ಗೌಡ ಈವರಿಗೆ ತನಿಖಾಧಿಕಾರಿಯಾಗಿದ್ದರು. ತನಿಖಾಧಿಕಾರಿಯನ್ನು ಬದಲು ಮಾಡಿ ಎಂದು ಎಬಿವಿಪಿಯಿಂದ ಒತ್ತಡ ಬಂದಿತ್ತು. ಪೊಲೀಸರು ಎಫ್ಐಆರ್ ದಾಖಲು ಮಾಡಲು ವಿಳಂಬ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ರೋಶ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಅವರಿಗೆ ತನಿಖೆ ಜವಾಬ್ದಾರಿಯನ್ನ ನೀಡಲಾಗಿದೆ. ಮಹಿಳೆಯರಿಗೆ ಸಂಬಂಧಿಸಿದ ಪ್ರಕರಣ ಆಗಿರುವುದರಿಂದ, ವಿದ್ಯಾರ್ಥಿನಿಯರು, ಕಾಲೇಜು ಸಿಬ್ಬಂದಿ ಹೇಳಿಕೆ ದಾಖಲಿಸಲು ಸುಲಭವಾಗುವಂತೆ ತನಿಖಾ ತಂಡದಲ್ಲಿ ಹೆಚ್ಚುವರಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲು ಉಡುಪಿ ಎಸ್‌ಪಿ ಅಕ್ಷಯ್ ನಿರ್ಧರಿಸಿದ್ದಾರೆ.