ಡೈಲಿ ವಾರ್ತೆ:30 ಜುಲೈ 2023
ಸಾಸ್ತಾನ ಸಿ.ಎ ಬ್ಯಾಂಕ್ ಚುನಾವಣೆ ಫಲಿತಾಂಶ: ಬಿಜೆಪಿ, ಕಾಂಗ್ರೆಸ್ ಸಮಬಲ, ಓರ್ವ ಪಕ್ಷೇತರಿಗೆ ಜಯ
ಕೋಟ:ಬಹಳ ಕುತೂಹಲದ ಜಿದ್ದಾಜಿದ್ದಿನ ಕಣವಾದ ಸಾಸ್ತಾನ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿಯ 13 ಸ್ಥಾನಗಳಲ್ಲಿ 12 ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 6, ಕಾಂಗ್ರೆಸ್ ಬೆಂಬಲಿತ 5, ಓರ್ವ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದು, ಎಸ್ಟಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧ ಆಯ್ಕೆಗೊಂಡಿದ್ದು, ಇದೀಗ ಬಿಜೆಪಿ 6, ಕಾಂಗ್ರೆಸ್ 6, ಓರ್ವ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲಗೊಂಡಿದೆ.
ಪಾಂಡೇಶ್ವರ ಸಾಮಾನ್ಯ ಕ್ಷೇತ್ರದಿಂದ ಚಂದ್ರಮೋಹನ್, ಶ್ರೀಧರ ಪಿ.ಎಸ್, ಐರೋಡಿ ಸಾಮಾನ್ಯ ಕ್ಷೇತ್ರದಿಂದ ಆನಂದ ಗಾಣಿಗ, ಎ.ರಮೇಶ್ ಕಾರಂತ, ಮೂಡುಹಡು ಸಾಮಾನ್ಯ ಕ್ಷೇತ್ರದಿಂದ ವಿಜಯ ಪೂಜಾರಿ, ಅರುಣ ಪೂಜಾರಿ ವೈ, ಬಾಳೆಕುದ್ರು ಸಾಮಾನ್ಯ ಕ್ಷೇತ್ರದಿಂದ ಸುರೇಶ್ ಅಡಿಗ, ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಗೋವಿಂದ ಪೂಜಾರಿ, ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಕಿರಣ್ ಥೋಮಸ್ ಡಾಯಸ್, ಮಹಿಳಾ ಮೀಸಲು ಕ್ಷೇತ್ರದಿಂದ ಲೀಲಾವತಿ ಗಂಗಾಧರ ಪೂಜಾರಿ, ಕಮಲ ಆಚಾರ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಶೇಖರ ಗದ್ದೆಮನೆ ಜಯಗಳಿಸಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಪ್ರೀತಿ ಅವಿರೋಧ ಆಯ್ಕೆಗೊಂಡಿದ್ದಾರೆ.
ಬಿಜೆಪಿ ಬೆಂಬಲಿತರಾಗಿ ಎ.ರಮೇಶ್ ಕಾರಂತ, ವಿಜಯ ಪೂಜಾರಿ, ಅರುಣ ಪೂಜಾರಿ ವೈ, ಗೋವಿಂದ ಪೂಜಾರಿ, ಕಿರಣ್ ಥೋಮಸ್ ಡಾಯಸ್, ಶೇಖರ ಗದ್ದಮನೆ, ಕಾಂಗ್ರೆಸ್ ಬೆಂಬಲಿತರಾಗಿ ಚಂದ್ರಮೋಹನ್, ಶ್ರೀಧರ ಪಿ.ಎಸ್., ಆನಂದ ಗಾಣಿಗ, ಲೀಲಾವತಿ ಗಂಗಾಧರ್, ಕಮಲ ಆಚಾರ್, ಪ್ರೀತಿ, ಪಕ್ಷೇತರರಾಗಿ ಸುರೇಶ್ ಅಡಿಗ ಆಯ್ಕೆಗೊಂಡಿದ್ದಾರೆ.
ಮತ ಎಣಿಕೆಯ ಸಂದರ್ಭದಲ್ಲಿ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯ ಕಾರ್ಕಡ ರಾಜು ಪೂಜಾರಿ, ಶಂಕರ ಅಂಕದಕಟ್ಟೆ, ಸುರೇಶ್ ಕುಂದರ್, ವಿಠಲ ಪೂಜಾರಿ, ಜಯೇಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.