



ಡೈಲಿ ವಾರ್ತೆ: 31 ಜುಲೈ 2023

ಕಡೇಶಿವಾಲಯ ರೋಟರಿ ಸಮುದಾಯ ದಳ ಇದರ 2023- 24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಬಂಟ್ವಾಳ : ಕಡೇಶಿವಾಲಯ ರೋಟರಿ ಸಮುದಾಯದ ದಳ  ಇದರ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು  ರೋಟರಿ ಭವನದಲ್ಲಿ ನಡೆಯಿತು.
    ರೋಟರಿ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷ ಪ್ರಕಾಶ್ ಬಾಳಿಗ ಪದಗ್ರಹಣ ನೆರವೇರಿಸಿದರು.  ವೇದಿಕೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಇದರ ಕಾರ್ಯದರ್ಶಿ ಸದಾಶಿವ ಬಾಳಿಗ , ಸಾಹಿತಿ ಮತ್ತು ಸಮಾಜ ಸೇವಕರಾದ ಶ್ರೀಮತಿ ವಿಂಧ್ಯಾ ಎಸ್.ರೈ , ರೋಟರಿ ಕ್ಲಬ್ ಬಂಟ್ವಾಳ ಇದರ ನಿಕಟ ಪೂರ್ವ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ದಳದ ನಿಕಟ ಪೂರ್ವ ಅಧ್ಯಕ್ಷ ಯೋಗೀಶ್ ನಾಯ್ಕ್ ಡಿ. ದಾಳಿಂಬ ಮತ್ತು ದಳದ ಕಾರ್ಯದರ್ಶಿ  ಜಹೀರ್ ಪ್ರತಾಪನಗರ ಉಪಸ್ಥಿತರಿದ್ದರು .  
   ರೋಟರಿ ಸಮುದಾಯ ದಳದ ಸಲಹಾ ಸಮಿತಿಯ ಚೇರ್ಮನ್  ಕೆ.ಕೆ.ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿ, ನೂತನ ಅಧ್ಯಕ್ಷ ಕಿಶೋರ್ ಕುಮಾರ್ ಬಿ. ವಂದಿಸಿದರು, ದಳದ ಸದಸ್ಯ ನವೀನ್ ನಾಯ್ಕ್ ಪಿಳಿಂಗಳ ಕಾರ್ಯಕ್ರಮ ನಿರೂಪಿಸಿದರು.