ಡೈಲಿ ವಾರ್ತೆ:01 ಆಗುಸ್ಟ್ 2023

ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಮೃತ್ಯು

ಚಿಕ್ಕಮಗಳೂರು: ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕನೊಬ್ಬ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತ ದುರ್ದೈವಿಯನ್ನು ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ಗಿರೀಶ್ (25) ಎನ್ನಲಾಗಿದೆ.
ಮೂಡಿಗೆರೆಯಲ್ಲಿ ಅಡುಗೆ ವೃತ್ತಿ ಮಾಡುತ್ತಿದ್ದ ಗಿರೀಶ್ ಕಳೆದ ವಾರವಷ್ಟೇ ಮೂಡಿಗೆರೆಯಿಂದ ಕೇದಾರನಾಥ ಯಾತ್ರೆಗೆ ತೆರಳಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಕೇದಾರನಾಥದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಕುರಿತು ಕೇದಾರನಾಥ ಪೊಲೀಸರು ಗಿರೀಶ್ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಸದ್ಯ ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಗಿರೀಶ್ ಮೃತದೇಹವಿರುವುದಾಗಿ ಪೊಲೀಸರು ತಿಳಿಸಿದ್ದಾರೆ.