ಡೈಲಿ ವಾರ್ತೆ:03 ಆಗಸ್ಟ್ 2023
ಮುಖದಲ್ಲಿನ ಕಲೆ, ಸುಕ್ಕುಗಳಿಂದ ಮುಕ್ತಿ ಬೇಕೆ? ರಾತ್ರಿಯಲ್ಲಿ ಹೀಗೆ ಮಾಡಿ…ಗ್ಲೋಯಿಂಗ್ ಸ್ಕಿನ್ ನಿಮ್ಮದಾಗುತ್ತದೆ – ಇಲ್ಲಿದೆ ಮಾಹಿತಿ
ಅರೋಗ್ಯ: ಚರ್ಮದ ಆರೈಕೆಯ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ಪೋಷಕಾಂಶಗಳು ನಮ್ಮ ಚರ್ಮಕ್ಕೆ ಬೇಕಾಗುತ್ತದೆ. ತ್ವಚೆಯನ್ನು ಕಲೆಯಿಲ್ಲದಂತೆ ಇರಿಸಿಕೊಳ್ಳಲು, ಜನರು ವಿವಿಧ ರೀತಿಯ ಸೌಂದರ್ಯ ಚಿಕಿತ್ಸೆಗಳು ಹಾಗೂ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಹೊಳೆಯುವ ಚರ್ಮಕ್ಕಾಗಿ ನೀವು ಮನೆಮದ್ದುಗಳನ್ನು ಸಹ ಬಳಸಬಹುದು.
ಬಹಳಷ್ಟು ಬಾರಿ ಮಾರುಕಟ್ಟೆಯಿಂದ ಖರೀದಿಸಿದ ಉತ್ಪನ್ನಗಳನ್ನು ಬಳಸುವುದರಿಂದ ಮುಖದ ಮೇಲೆ ಮೊಡವೆಗಳ ಅಪಾಯವೂ ಇದೆ. ಆದರೆ ಸೌಂದರ್ಯವರ್ಧಕ ಉತ್ಪನ್ನಗಳ ಬದಲಿಗೆ ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಅಲೋವೆರಾ ಜೆಲ್ ಅನ್ನು ಬಳಸಬಹುದು.
1) ರಾತ್ರಿ ಮಲಗುವ ಮುನ್ನ ನಿಮ್ಮ ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದರ ನಂತರ, ಒಂದು ಚಮಚ ಅಲೋವೆರಾ ಜೆಲ್‌ನಲ್ಲಿ ಒಂದು ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ಮುಖಕ್ಕೆ ಅನ್ವಯಿಸಿ. ರಾತ್ರಿಯಿಡೀ ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಇರಿಸಿ ಮತ್ತು ಬೆಳಿಗ್ಗೆ ನೀರಿನಿಂದ ತೊಳೆಯಿರಿ. ಇದು ಚರ್ಮದ ಕಲೆಗಳು ಮತ್ತು ಮೊಡವೆ ಸಮಸ್ಯೆಗಳನ್ನು ಪರಿಹರಿಸುತ್ತದೆ.
2) ಧೂಳು ಮತ್ತು ಕೊಳೆಯಿಂದಾಗಿ ಚರ್ಮವು ಮಂದವಾಗಿರುತ್ತದೆ. ಅಲೋವೆರಾವನ್ನು ಮುಖಕ್ಕೆ ಹಚ್ಚಿದರೆ ಚರ್ಮ ಮೃದುವಾಗುತ್ತದೆ. ಇದರಲ್ಲಿರುವ ಕೊಬ್ಬಿನಾಮ್ಲಗಳು ಮತ್ತು ಕಿಣ್ವಗಳು ತ್ವಚೆಯನ್ನು ಕಾಂತಿಯುತವಾಗಿಸುತ್ತದೆ.
3) ಚರ್ಮದಲ್ಲಿನ ಸುಕ್ಕುಗಳ ಸಮಸ್ಯೆಯನ್ನು ಕಡಿಮೆ ಮಾಡಲು, ತೇವಾಂಶದಿಂದ ಇಡಬೇಕು. ತ್ವಚೆಯಲ್ಲಿ ಸುಕ್ಕುಗಳುಂಟಾಗಿ ಮುಖವು ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಮುಖದ ಮೇಲಿನ ಸುಕ್ಕು, ಮೆಲಸ್ಮ ಮತ್ತು ಕಲೆಗಳನ್ನು ನಿವಾರಿಸಲು ನಿಂಬೆರಸವು ಅತ್ಯುತ್ತಮ ಮನೆ ಮದ್ದಾಗಿದೆ. ಕಲೆ ಇರುವ ಜಾಗಕ್ಕೆ ಈ ರಸವನ್ನು ಹತ್ತಿಯ ಉಂಡೆಯಲ್ಲಿ ಅದ್ದಿಕೊಂಡು ಹಚ್ಚಿ ಮಸಾಜ್ ಮಾಡಿ 15 ನಿಮಿಷಗಚಳ ನಂತರ ಮುಖವನ್ನು ಚೆನ್ನಾಗಿ ತೊಳೆಯಬೇಕು.
4) ಮುಖದ ಮೇಲಿನ ಕಲೆಗಳು, ಕಪ್ಪು ಚರ್ಮ, ಕಲೆಗಳನ್ನು ಹೋಗಲಾಡಿಸಲು ನಿಂಬೆ ರಸ ಮತ್ತು ಟೊಮಾಟೊ ರಸಗಳ ಮಿಶ್ರಣವನ್ನು ಬಳಸಿ. ಈ ಮಿಶ್ರಣವು ಮುಖದ ಮೇಲಿನ ಕಲೆಗಳಿಂದ ನಿಮಗೆ ವಿಮುಕ್ತಿಯನ್ನು ನೀಡುತ್ತದೆ.
5) ಪ್ರತಿದಿನ 6 ರಿಂದ 8 ಗ್ಲಾಸ್ ನೀರನ್ನು ಸೇವಿಸಿ. ಇದರಿಂದ ದೇಹದಲ್ಲಿರುವ ಅಪಾಯಕಾರಿ ಕಲ್ಮಷಗಳೆಲ್ಲವು ದೇಹದಿಂದ ಹೊರದೂಡಲ್ಪಟ್ಟು, ನಿಮ್ಮ ತ್ವಚೆಯು ಎಲ್ಲ ವಿಧವಾದ ಕಲೆಗಳಿಂದ ಮುಕ್ತವಾಗಿ ನಳ ನಳಿಸುತ್ತಿರುತ್ತದೆ. ಮತ್ತೇಕೆ ತಡ ನೀರು ಕುಡಿಯಿರಿ.