


ಡೈಲಿ ವಾರ್ತೆ:04 ಆಗಸ್ಟ್ 2023


ಉಪ್ಪುಂದ:ಕೊಡೇರಿ ಕಡಲ ತೀರದಲ್ಲಿ ಮತ್ತೊಂದು ದೋಣಿ ದುರಂತ – ಸಮುದ್ರದ ಬೃಹತ್ ಅಲೆಗೆ ಸಿಲುಕಿ ದೋಣಿ ಪಲ್ಟಿ, 9 ಮೀನುಗಾರರು ಪಾರು!
ಕುಂದಾಪುರ:ಬೈಂದೂರು ತಾಲೂಕಿನ ಕೊಡೇರಿ ಕಡಲ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೃಹತ್ ಅಲೆಗೆ ದೋಣಿ ಸಿಲುಕಿ ಪಲ್ಟಿಯಾದ ಘಟನೆ ಆ.4ರ ಶುಕ್ರವಾರ ಸಂಭವಿಸಿದೆ.
ಉಪ್ಪುಂದ ಗ್ರಾಮದ ಪಾಳ್ಯದರತೋಪ್ಲು ಪುರ್ಶುಯ್ಯನ ಪುಂಡಲಿಕ ಎನ್ನುವರ ಮಾಲಿಕತ್ವದ ಶ್ರೀ ದುರ್ಗಾಪರಮೇಶ್ವರಿ ದೋಣಿಯಲ್ಲಿ 9 ಮಂದಿ ಮೀನುಗಾರರು ಇಂದು ಮೀನುಗಾರಿಕೆಗೆ ತೆರಳಿದ್ದರು. ಕೊಡೇರಿ ಸಮುದ್ರ ತೀರದ ಸುಮಾರು 5 ನಾಟಿಕಲ್ ದೂರದಲ್ಲಿ ಅಲೆಗಳ ಹೊಡೆತಕ್ಕೆ ದೋಣಿ ಸಿಲುಕಿ ಪಲ್ಟಿಯಾಗಿದೆ. ತಕ್ಷಣ ಇತರೆ ದೋಣಿಗಳ ಸಹಾಯದಿಂದ ಮೀನುಗಾರನ್ನು ಪಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ.