ಡೈಲಿ ವಾರ್ತೆ:05 ಆಗಸ್ಟ್ 2023
ಸಂಪಾದಕರು: ಇಬ್ರಾಹಿಂ ಕೋಟ
ಕೋಟ: ಇಂದು (ಆ.5) ಕಾವಡಿ ಹಾಲು ಡೈರಿಯ ಚುನಾವಣೆ – ಮತದಾರರ ಪಟ್ಟಿಯ ಅಕ್ರಮ ತಿದ್ದುಪಡಿ – 11 ಮಂದಿ ಅಭ್ಯರ್ಥಿಗಳಿಂದ ಮತದಾನ ಬಹಿಷ್ಕಾರ!
ಕೋಟ: ಬ್ರಹ್ಮಾವರ ತಾಲೂಕಿನ ಕಾವಡಿ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ) ಕಾವಡಿ ಇದರ 2023 – 24 ರ ಸಾಲಿನ ಮುಂದಿನ ಐದು ವರ್ಷಗಳಿಗೆ ಆಡಳಿತ ಮಂಡಳಿ ಸದಸ್ಯರಾಗಲು 11 ಜನ ಅಭ್ಯರ್ಥಿಗಳಿಗಾಗಿ ಅಗಸ್ಟ್ 5 ರಂದು ಚುನಾವಣೆ ನಡೆಯುತ್ತಿದೆ. ಆಡಳಿತ ಮಂಡಳಿಯ ಸದಸ್ಯತನ ಆಕಾಂಕ್ಷಿಗಳಾಗಿ ಎರಡು ಬಣದಿಂದ ಒಟ್ಟು 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿದ್ದಾರೆ.
ಆದರೆ ಒಂದು ಬಣದ 11ಜನ ಅಭ್ಯರ್ಥಿಗಳಿಗೆ ನೀಡಿದ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ಸುಮಾರು 177 ಸದಸ್ಯರನ್ನು ಅನರ್ಹಗೊಳಿಸಿ ಅವರನ್ನು ಮತದಾನ ಮಾಡುವುದರಿಂದ ವಂಚಿತರನ್ನಾಗಿ ಮಾಡಿರುವುದು ಅಭ್ಯರ್ಥಿಗಳ ಗಮನಕ್ಕೆ ಬಂದಿರುತ್ತದೆ.
ಆದರೆ, ಈ ನಡುವೆ ಒಂದು ಬಣದವರು ಹೈಕೋರ್ಟ್ ಮೆಟ್ಟಿಲೇರಿ, 177 ಅನರ್ಹ ಸದಸ್ಯರಲ್ಲಿ 43 ಸದಸ್ಯರನ್ನು ಅರ್ಹಗೊಳಿಸಿ ಮತದಾನ ಮಾಡಲು ಹಕ್ಕು ನೀಡಿರುವುದು ಗಮನಕ್ಕೆ ಬಂದಿದೆ. ಇದು ಹಿಂದಿನ ಆಡಳಿತ ಮಂಡಳಿಯ ಹುನ್ನಾರವಾಗಿದೆ ಎಂದು ಎದುರು ಬಣದವರು ಆಕ್ಷೇಪಿಸಿದ್ದಾರೆ.
ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರ ನಿಯಮ 13ಡಿ (2-A) ರನ್ವಯ ಸಂಘದ ಚುನಾವಣೆಗೆ 195 ದಿನ ಬಾಕಿ ಇರುವಾಗ ಅನರ್ಹ ಸದಸ್ಯರಿಗೆ ನೋಟಿಸ್ ನೀಡಿ, ಸ್ವೀಕೃತವಾದ ಅಹವಾಲುಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿ, ನಿಯಮಾನುಸಾರ ವಿಚಾರಣೆ ನಡೆಸಿ ವಿಲೇವಾರಿ ಗೊಳಿಸಬೇಕು. ಆದರೆ ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸಿರುವುದರಿಂದ ಸಂಘದ ಸದಸ್ಯರಿಗೆ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶದಿಂದ ಮುಂಚಿತರಾಗಿದ್ದಾರೆ.
ಇದು ಕಾನೂನಿಗೆ ವಿರುದ್ಧ ಹಾಗೂ ಸ್ಪಷ್ಟ ಉಲ್ಲಂಘನೆಯಾಗಿದೆ. ಮಾತ್ರವಲ್ಲ, ಈ ಕ್ರಮ ದುರುದ್ದೇಶದಿಂದ ಕೂಡಿದೆ ಎಂದು ಅಪಾದಿಸಲಾಗಿದೆ. ಈ ರೀತಿಯಾಗಿ ಸಂಘದ ಸದಸ್ಯರಿಗೆ ಅನ್ಯಾಯವಾಗಿ ಅವರನ್ನು ಹಕ್ಕಿನಿಂದ ವಂಚಿತರನ್ನಾಗಿ ಮಾಡಿರುವುದಕ್ಕೆ 11 ಮಂದಿ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸುವುದರೊಂದಿಗೆ, ಆ 11 ಮಂದಿ ಅಭ್ಯರ್ಥಿಗಳೂ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಮತದಾನದಿಂದ ವಂಚಿತರಾದ ಸಂಘದ ಸದಸ್ಯರ ಪರವಾಗಿ ಅನ್ಯಾಯದ ವಿರುದ್ಧ ಕಾನೂನು ಹೋರಾಟ ಮಾಡಲು ತಮ್ಮ ಸಂಪೂರ್ಣ ಬೆಂಬಲ ಘೋಷಿಸಿ ಪ್ರತಿಭಟಿಸಿದ್ದಾರೆ.
ಈ ಸಂದರ್ಭ 11 ಜನ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿ ಅನರ್ಹ ಸದಸ್ಯರ ಪಟ್ಟಿಯನ್ನು ಮರುಪರಿಶೀಲಿಸಿ, ಅನ್ಯಾಯ ಹಾಗೂ ಮೋಸ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ಚುನಾವಣೆ ಬಹಿಷ್ಕರಿಸಿದ 11 ಜನ ಅಭ್ಯರ್ಥಿಗಳು ಹೆಸರುಗಳು ಇಂತಿವೆ :
1. ಮಂಜುನಾಥ ಹೆಬ್ಬಾರ್
2. ಮಹಾಬಲ ಪೂಜಾರಿ
3. ಸಂತೋಷ್ ಶೆಟ್ಟಿ
4. ರಾಜೀವ ಶೆಟ್ಟಿ
5. ದಿನಕರ್ ಶೆಟ್ಟಿ
6. ಕೃಷ್ಣ ಜಿ. ಕುಮಾರ್
7. ಸಂಪ ಮರಕಾಲ್ತಿ
8. ರುದ್ರಮ್ಮ ಶೆಟ್ಟಿ
9. ಸವಿತಾ
10. ಜ್ಯೋತಿ ಕುಲಾಲ್
11. ಗಿರಿಜಾ ಕುಲಾಲ್ತಿ ಅಲ್ಲದೆ ಸಂಘದ ಸದಸ್ಯ ಮತ್ತು ಸ್ಥಳೀಯರಾದ ಗಣೇಶ್ ರಾವ್, ಉದಯ ಚಂದ್ರ ಶೆಟ್ಟಿ, ಪ್ರಭಾಕರ್ ಮಾಸ್ಟರ್, ಗೋಪಾಲ್ ಕಾಂಚನ್, ಜಯರಾಮ್ ಶೆಟ್ಟಿ, ವೇದಾವತಿ ಜಿ. ರಾವ್, ಜಯ ಮಹಾಬಲ ಪೂಜಾರ್ತಿ, ಜಯರಾಮ್ ಶೆಟ್ಟಿ ಹೌರಾಲ್, ಕೊರ್ಗು ಶೆಟ್ಟಿ ಹೌರಾಲ್, ಮಹೇಶ್ ಕುಲಾಲ್ ಹೌರಾಲ್, ಉದಯ ಪೂಜಾರಿ ಹೌರಾಲ್, ಸುರೇಶ್ ಶೆಟ್ಟಿ ಕಾವಡಿ, ದಿವಾಕರ್ ಶೆಟ್ಟಿ ಕಾವಡಿ, ಪ್ರಸಾದ್ ಶೆಟ್ಟಿ ಕಾವಡಿ, ಸುಕೇಶ್ ಹೌರಾಲ್, ಪ್ರಭಾಕರ್ ಶೆಟ್ಟಿ ಹೌರಾಲ್, ಪ್ರದೀಪ್ ಶೆಟ್ಟಿ ಹೌರಾಲ್, ಗೋವಿಂದ ಮರಕಾಲ ಹೌರಾಲ್, ಮಲ್ಲೇಶ್ ಶೆಟ್ಟಿ ಹೌರಾಲ್, ನಾಗೇಶ್ ಕಾಂಚನ್ ಹೌರಾಲ್ ಮೊದಲದವರು ಬೆಂಬಲ ಸೂಚಿಸಿದರು.