


ಡೈಲಿ ವಾರ್ತೆ:05 ಆಗಸ್ಟ್ 2023


ವರದಿ: ರವಿತೇಜ ಕಾರವಾರ
ಹಾವು ಕಡಿತದಿಂದ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ ಚಿಕಿತ್ಸೆಗೆ ಸ್ಪಂದಿಸದೇ ಮೃತ್ಯು!
ಕಾರವಾರ: ಹಾವು ಕಡಿತದಿಂದ ತೀವ್ರ ನಿಗಾ ಘಟಕದಲ್ಲಿ ಕಳೆದ 5 ದಿನಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ ಕೊನೆಗೂ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ತಾಲ್ಲೂಕಿನ ಶಿರವಾಡದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಹಾಯಕಿಯಾಗಿದ್ದ ಆನಂದಿ ಅವರಿಗೆ ಕರ್ತವ್ಯದಲ್ಲಿರುವಾಗಲೇ ಮಂಗಳವಾರದಂದು ಹಾವು ಕಡಿದಿತ್ತು.
ಶಾಲಾ ಸಮಯದಲ್ಲಿ ನೀರಿನ ಪಂಪ್ ಸ್ಟಾರ್ಟ್ ಮಾಡಲು ತೆರಳುವ ವೇಳೆ ಆನಂದಿ ಅವರಿಗೆ ಹಾವು ಕಚ್ಚಿದ್ದು ತೀವ್ರ ಅಸ್ವಸ್ಥರಾದ ಅವರನ್ನು ಶಿಕ್ಷಕರು ಹಾಗೂ ಸಾರ್ವಜನಿಕರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಯ್ದು ಬಳಿಕ ನಗರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು.
ಅವರ ಸ್ಥಿತಿ ಚಿಂತಾಜನಕವಾಗಿದ್ದು ಕಳೆದ 5 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು.
ಕಾರವಾರ ಗ್ರಾಮೀಣ ಪೊಲೀಸ್
ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.