ಡೈಲಿ ವಾರ್ತೆ:08 ಆಗಸ್ಟ್ 2023
ಕುಟುಂಬಕ್ಕೆ ಸ್ಪಂದನಾ ಮೃತದೇಹ ಹಸ್ತಾಂತರ ಪ್ರಕ್ರಿಯೆ ಪೂರ್ಣ
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದೆ. ಮರಣೋತ್ತರ ಪರೀಕ್ಷೆಯ ವರದಿ ಬರುತ್ತಿದ್ದಂತೆಯೇ ಮುಂದಿನ ಪ್ರಕ್ರಿಯೆಗಳು ಚುರುಕುಗೊಂಡಿದ್ದರಿಂದ ಇದೀಗ ಸ್ಪಂದನಾ ಅವರ ಮೃತದೇಹವನ್ನು ಬೆಂಗಳೂರಿಗೆ ತರುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾತ್ರಿ 8.30ರ ಹೊತ್ತಿಗೆ ಮೃತದೇಹ ಹೊತ್ತ ವಿಮಾನ ಬ್ಯಾಂಕಾಕ್ ನಿಂದ ಹೊರಟರೆ, ಬೆಂಗಳೂರಿಗೆ 11.15ಕ್ಕೆ ವಿಮಾನ ಆಗಮನವಾಗಲಿದೆ.
ಬೆಂಗಳೂರಿನಲ್ಲೂ ಅಂತಿಮ ದರ್ಶನಕ್ಕೆ ಸ್ಪಂದನಾ ಅವರ ತವರು ಮನೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಲ್ಲೇಶ್ವರಂ ಆಟದ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇವತ್ತು ರಾತ್ರಿಯಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಳೆ ಮಧ್ಯಾಹ್ನದವರೆಗೂ ಅಂತಿಮ ದರ್ಶನ ಮಾಡಬಹುದಾಗಿದೆ.