ಡೈಲಿ ವಾರ್ತೆ:09 ಆಗಸ್ಟ್ 2023
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ,ಕುಂದಾಪುರ. ಉಡುಪಿ.
” ಸಕಲ ಗೌರವಗಳೊಂದಿಗೆ ಸ್ಪಂದನ ರವರ ಅಂತಿಮ ವಿದಾಯ…, ಮಲ್ಲೇಶ್ವರನಲ್ಲಿ ಸಾರ್ವಜನಿಕ ದರ್ಶನ, ಕಣ್ಣೀರ ಭಾಸ್ಪಾಂಜಲಿಯ ಮೂಲಕ ಸ್ಪಂದನ ಅವರ ಮೃತ ದೇಹ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ….!” ಬಾರದ ಲೋಕದತ್ತ “ಸ್ಪಂದನೆಯ ಭಾವದ ಅಂತಿಮ ಪಯಣ….!”
ಬೆಂಗಳೂರು: ” ಚಿನ್ನಾರಿ ಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ ಬಹಳ ಸೌಮ್ಯ ಸ್ವಭಾವದ ಹುಡುಗ, ಜೀವನದಲ್ಲಿ ತನ್ನ ಸ್ವಂತಿಕೆಯಿಂದ ಚಿತ್ರನಟನೇಯ ಮೂಲಕ ಬದುಕನ್ನು ಕಟ್ಟಿಕೊಂಡವರು. ಅದೇ ರೀತಿ ಸ್ಪಂದನ ಅವರನ್ನು ಬಹಳ ಪ್ರೀತಿಯಿಂದ ಸಪ್ತಪದಿ ತೊಳೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದರು, ದಾಂಪತ್ಯ ಪ್ರತಿಕವಾಗಿ ಓರ್ವ ಗಂಡು ಮಗನಿಗೆ ಜನನವನ್ನು ಕೂಡ ಸ್ಪಂದನವರು ನೀಡಿದ್ದರು. ಆದರೆ ವಿಧಿ ಆಟವೇ ಬೇರೆಯಾಗಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಬ್ಯಾಂಕಾಕ್ ನಲ್ಲಿ ತೀವ್ರ ಹೃದಯಘಾತದಿಂದ ಮೃತಪಟ್ಟಿದ್ದರು. ಇತ್ತೀಚಿಗೆ ಅವರು ಗೆಳತಿಯರ ಜೊತೆ ಹಾಗೂ ಸಂಬಂಧಿಕರ ಜೊತೆಗೂಡಿಗೆ ವಿರಾಮದ ಸಂದರ್ಭದಲ್ಲಿ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದರು. ಅದೇ ರೀತಿ ಎಂದಿನಂತೆ ಊಟವನ್ನು ಮುಗಿಸಿ ಸ್ಪಂದನ ಅವರು ಎಂದಿನಂತೆ ನಿದ್ದೆಗೆ ಜಾರಿದರು, ಆದರೆ ಅದೇ ನಿದ್ದೆ ಅವರ ಪಾಲಿಗೆ ಕೊನೆಯದಾಗಿದ್ದು ವಿಪರ್ಯಾಸ. ಮುಂಜಾನೆ ಸ್ಪಂದನವರು ಎದ್ದೇಳದ ಕಾರಣ ಅವರನ್ನು ಎದ್ದೇಳಿಸುವ ಸಲುವಾಗಿ ಕುಟುಂಬಸ್ಥರು ತೆರಳಿದಾಗ ವಿಚಾರ ಬೆಳಕಿಗೆ ಬಂತು.
ಬ್ಯಾಂಕಾಕ್ ನಿಂದ ಮೃತ ದೇಹ ಬೆಂಗಳೂರಿಗೆ:-
ಬ್ಯಾಂಕಾಕ್ನಲ್ಲಿ ಮೃತಪಟ್ಟಿದ್ದ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಮೃತ ದೇಹವನ್ನು ವಿಶೇಷ ವಿಮಾನದಲ್ಲಿ ವಿಮಾನದಲ್ಲಿ ರವಾನೆ ಆಗುತ್ತದೆ, ನ೦ತರ ಬೆಂಗಳೂರಿನ ತಂದೆಯ ನಿವಾಸವಾದ ಮಲ್ಲೇಶ್ವರಂ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಹರೀಶ್ ಚಂದ್ರ ಘಾಟ್ ನಲ್ಲಿ ಈಡಿಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿ ವಿಧಾನಗಳು ನಡೆದಿದೆ.ವೀಕೆಂಡ್ ವಿತ್ ರಮೇಶ್’ ಸೀಸನ್ 3ರಲ್ಲಿ ಅತಿಥಿಯಾಗಿ ಆಗಮಿಸಿದ್ದ ವಿಜಯ್ ರಾಘವೇಂದ್ರ, ಸ್ಪಂದನಾ ಕುರಿತು ಮಾತನಾಡಿದ್ದರು. ‘ನನಗೆ ಬಹಳ ಸಂಕೋಚ. ಸ್ಪಂದನಾ ಅವರನ್ನು ಮಾತನಾಡಿಸುವುದಕ್ಕೇ 3 ವರ್ಷ ತೆಗೆದುಕೊಂಡಿದ್ದೇನೆ. 2004ರಲ್ಲಿ ಮಲ್ಲೇಶ್ವರ ಕಾಫಿ ಡೇನಲ್ಲಿ ಒಂದು ಹುಡುಗಿಯನ್ನು ನೋಡುತ್ತೇನೆ, 2006ರಲ್ಲಿ ಅದೇ ಹುಡುಗಿಯನ್ನು ಶೇಷಾದ್ರಿಪುರ ಕಾಫಿ ಡೇನಲ್ಲಿ ನೋಡುತ್ತೇನೆ. ಆನಂತರ ಲವ್ ಲೈಫ್, ಪುಟ ಎಲ್ಲವೂ ಸ್ಪಂದನಾ..’ ಎಂದು ವಿಜಯ್ ರಾಘವೇಂದ್ರ ಹೇಳಿದ್ದರು
ಆಗಸ್ಟ್ 26, 2007 ರಂದು ವಿಜಯ್ ರಾಘವೇಂದ್ರ – ಸ್ಪಂದನಾ ಮದುವೆ ಜರುಗಿತು. ಕುಟುಂಬಸ್ಥರು, ಆತ್ಮೀಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸ್ಪಂದನಾ ಕೊರಳಿಗೆ ವಿಜಯ್ ರಾಘವೇಂದ್ರ ಮಾಂಗಲ್ಯಧಾರಣೆ ಮಾಡಿದರು. ಸ್ಪಂದನ ಅವರ ನಿಧನದ ಸುದ್ದಿ ಬರಸಿಡಿಲಿನಂತೆ ಬಡಿದಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಅದೇ ರೀತಿ ನಟ ವಿಜಯ್ ರಾಘವೇಂದ್ರ ಅತಿಯಾಗಿ ಪ್ರೀತಿಸುತ್ತಿದ್ದ ಮಡದಿ ಸ್ಪಂದನ ಬದುಕುಳಿಯಲಿಲ್ಲ ಎನ್ನುವುದೇ ಮನದಾಳದ ನೋವು. ಅದೇ ರೀತಿ ವಿಜಯ ರಾಘವೇಂದ್ರ ಈ ರೀತಿಯಾಗಿ ನೋವನ್ನು ಅನುಭವಿಸಿದ್ದ ಸಂಕಟ ಯಾರಿಂದಲೂ ಸಾಧ್ಯವಿಲ್ಲ.
ಮರಣೋತ್ತರ ಪರೀಕ್ಷೆ ಜತೆಗೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಧಿಗೊಳಿಸಿದ ಬಳಿಕ ಮಂಗಳವಾರ ಸಂಜೆ ವೇಳೆಗೆ ಹಸ್ತಾಂತರಿಸಲಾಯಿತು. ಪಾರ್ಥಿವ ಶರೀರ ಹೊತ್ತ ಥಾಯ್ ಏರ್‌ವೇಸ್ ವಿಮಾನವು ತಡರಾತ್ರಿ 11.30ಕ್ಕೆ ಬೆಂಗಳೂರಿಗೆ ಬಂದಿಳಿಯಿತು. ಇದೇ ವಿಮಾನದಲ್ಲಿ ವಿಜಯ್ ರಾಘವೇಂದ್ರ ಮತ್ತು ಪ್ರವಾಸಕ್ಕೆ ತೆರಳಿದ್ದ ಸ್ಪಂದನಾ ಸ್ನೇಹಿತರು ಮತ್ತು ಸಂಬಂಧಿಕರು ಬಂದಿದ್ದಾರೆ.ಬ್ಯಾಂಕಾಕ್ನಲ್ಲಿ ವಿದೇಶಿ ಪ್ರಜೆಗಳು ಮೃತಪಟ್ಟರೆ ಅದಕ್ಕೆ ಹಲವು ಪ್ರಕ್ರಿಯೆಗಳನ್ನು ಪಾಲಿಸಬೇಕು. ಹಾಗೆ ಪಾಲಿಸಿದ ಬಳಿಕವೇ ಮೃತದೇಹವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ. ವ್ಯಕ್ತಿ ಸತ್ತ ಬಳಿಕ ಮೊದಲು ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸ್ಥಳೀಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಯನ್ನು ತೆಗೆದುಕೊಳ್ಳುತ್ತಾರೆ. ಸಾವಿಗೆ ಕಾರಣ ಏನು ಎಂಬುದನ್ನು ಅವರು ತಿಳಿದುಕೊಳ್ಳುತ್ತಾರೆ. ಇದು ಸಹಜಸಾವು ಎಂದು ತಿಳಿದ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಆಗುತ್ತದೆ.
ಕುಟುಂಬದವರು ವೈದ್ಯಕೀಯ ವರದಿಯ ಜೊತೆ ಮರಣ ಪ್ರಮಾಣ ಪತ್ರ, ಪೊಲೀಸ್ ರಿಪೋರ್ಟ್ ಪಡೆದಿರಬೇಕು. ಮೃತರ ಪಾಸ್ಪೋರ್ಟ್, ವೀಸಾ ಪ್ರತಿ ಜೊತೆಗಿರಬೇಕು. ಇದನ್ನು ಥಾಯ್ಲೆಂಡ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ನೀಡಬೇಕು. ನಂತರ ಮೃತದೇಹ ರವಾನೆಗೆ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು. ಬಳಿಕ ಈ ವರದಿಗಳನ್ನು ಏರ್ಪೋರ್ಟ್ನಲ್ಲಿ ಸಲ್ಲಿಸಬೇಕು. ಆ ಬಳಿಕವೇ ಥೈಲ್ಯಾಂಡ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ಮೃತದೇಹ ಹಸ್ತಾಂತರ ಮಾಡಲಾಗಿದೆ.
ಕುಟುಂಬಕ್ಕೆ ಕಂಟಕವಾದ ಸರಣಿ ಆಘಾತ:-
ಹೃದಯಘಾತದಿಂದ ಪುನೀತ್ ರಾಜಕುಮಾರ್ ವಿಧಿವಶ:
ತೀವ್ರ ಹೃದಯಘಾತದಿಂದ ರಾಜ ಕುಟುಂಬದ ಕುಡಿ ಎಂದು ಕರೆಯಲ್ಪಡುವ , ಖ್ಯಾತಿಯ ಪುನೀತ್ ರಾಜಕುಮಾರ್ ಅತಿ ಚಿಕ್ಕ ವಯಸ್ಸಿನಲ್ಲಿ ವಿಧಿವಶರಾಗಿದ್ದು ಕುಟುಂಬಕ್ಕೆ ನಂಬಲಾಗದ ತುತ್ತಾಗಿ ಪರಿಣಮಿಸಿದೆ. ಈ ದುರಂತವು ಕುಟುಂಬಕ್ಕೆ ಹಾಗೂ ಪತ್ನಿ ಅಶ್ವಿನಿ ಹಾಗೂ ಮಕ್ಕಳಿಗೆ ಕರಾಳ ದಿನವಾಗಿ ಪರಿಣಮಿಸಿತ್ತು ಸಹಸ್ರರು ಅಭಿಮಾನಿಗಳಿಗೆ ಮನದ ನೋವು ಇದುವರೆಗೂ ಕಮರಿ ಹೋಗಿಲ್ಲ.
ಅಶ್ವಿನಿ ತಂದೆ ರೇವನಾಥ್ ಮರಣ: (2022 ಫೆಬ್ರವರಿ 20):
ಪುನೀತ್ ರಾಜ್ಕುಮಾರ್ ಅವರು ನಿಧನರಾದ ಬಳಿಕ ಅಶ್ವಿನಿ ಅವರು ಅನುಭವಿಸಿದ ನೋವನ್ನು ಪದಗಳಲ್ಲಿ ವಿವರಿಸಲು ಆಗದು. ಅದಾಗಿ ಕೆಲವೇ ತಿಂಗಳು ಕಳೆಯುವುದರಲ್ಲಿ ಅವರ ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಯಿತು. ಅಶ್ವಿನಿ ಅವರ ತಂದೆ ರೇವನಾಥ್ ಅವರು ಫೆಬ್ರವರಿ 20ರಂದು ನಿಧನರಾದರು. ಅಶ್ವಿನಿಯವರು ಪತಿಯನ್ನು ಕಳೆದುಕೊಂಡ ನೋವಿನ ಬೆನ್ನಲ್ಲೇ ತಂದೆಯನ್ನೂ ಕಳೆದುಕೊಳ್ಳುವಂತಾಗಿದ್ದಕ್ಕೆ ಅಭಿಮಾನಿಗಳು ವಿಧಿಯನ್ನು ಶಪಿಸಿದರು.
ಕಾಲು ಕಳೆದುಕೊಂಡ ಸೂರಜ್ (2023 ಜೂನ್ 24):
ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮನ ಮಗ ಸೂರಜ್ ಅವರು ಕೆಲವು ವಾರಗಳ ಹಿಂದೆ ಸಂಭವಿಸಿದೆ ಗಂಭೀರ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಜೂನ್ 24ರಂದು ಬೈಕ್ನಲ್ಲಿ ಪ್ರಯಾಣ ಮಾಡುತ್ತಿದ್ದ ಅವರಿಗೆ ಲಾರಿಯೊಂದು ಡಿಕ್ಕಿ ಹೊಡೆಯಿತು. ಆ ಅಪಘಾತದಲ್ಲಿ ಅವರ ಬಲಗಾಲು ಸಂಪೂರ್ಣ ನಜ್ಜುಗುಜ್ಜಾಯಿತು. ಅದರ ಪರಿಣಾಮವಾಗಿ ಅವರ ಕಾಲನ್ನು ವೈದ್ಯರು ಕತ್ತರಿಸಬೇಕಾಯಿತು. ಹೀರೋ ಆಗಬೇಕು ಎಂದು ಕನಸು ಕಂಡಿದ್ದ ಸೂರಜ್ ಅವರಿಗೆ ಈ ಘಟನೆಯಿಂದ ಆದ ನಷ್ಟ ಅಷ್ಟಿಷ್ಟಲ್ಲ.
ಹೃದಯಾಘಾತದಿಂದ ಸ್ಪಂದನಾ ನಿಧನ: (2023 ಆಗಸ್ಟ್ 06):
ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಫ್ಯಾಮಿಲಿ ಸಮೇತ ಬ್ಯಾಂಕಾಕ್ಗೆ ತೆರಳಿದ್ದರು. ಅಲ್ಲಿ ಅವರಿಗೆ ಹೃದಯಾಘಾತ ಆಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಪ್ರಯೋಜನ ಆಗಲಿಲ್ಲ. ಅವರ ನಿಧನದಿಂದ ಕುಟುಂಬದಲ್ಲಿ ಶೋಕ ಆವರಿಸಿದೆ. ವಿಜಯ್ ರಾಘವೇಂದ್ರ ಅವರಿಗೆ ಎಲ್ಲರೂ ಸಾಂತ್ವನ ಹೇಳುತ್ತಿದ್ದಾರೆ. ಸ್ಪಂದನಾ ಅವರನ್ನು ತುಂಬ ಇಷ್ಟಪಟ್ಟು ವಿಜಯ್ ರಾಘವೇಂದ್ರ ಮದುವೆ ಆಗಿದ್ದರು. ಪತ್ನಿಯ ಅಗಲಿಕೆಯಿಂದ ಅವರೀಗ ಕಣ್ಣೀರು ಹಾಕುತ್ತಿದ್ದಾರೆ.
ಸ್ಪಂದನ ವಿಧಿವಶಕ್ಕೆ ಗಣ್ಯರ ಸಂತಾಪ:
ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ವಿಧಿವಶದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂ ನ ತಂದೆಯ ನಿವಾಸ ದಲ್ಲಿ ಶಿವರಾಂ ಅವರ ಮನೆಯ ಬಳಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗಿದೆ. ಈ ಸಂದರ್ಭದಲ್ಲಿ ಚಿತ್ರ ರಂಗದ ಗಣ್ಯತೀತ ಗಣ್ಯರು, ಸಾರ್ವಜನಿಕರು, ಕುಟುಂಬಸ್ಥರು ದರ್ಶನ ಪಡೆದು, ಅಂತಿಮ ವಿಧಿ ವಿಧಾನವನ್ನು ಪೂರೈಸಿದರು.