ಡೈಲಿ ವಾರ್ತೆ:13 ಆಗಸ್ಟ್ 2023
ಬಿ.ಸಿ.ರೋಡ್ : ಕೊಡಂಗೆ ಪ್ರೌಢ ಶಾಲೆ ಸ್ಮಾರ್ಟ್ ಕಂಪ್ಯೂಟರ್ ಕ್ಲಾಸ್” ಉದ್ಘಾಟನೆ
ಬಂಟ್ವಾಳ : ಬಿ.ಸಿ ರೋಡ್ ಸಮೀಪದ ಕೊಡಂಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢ ಶಾಲೆ ಇಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೋಟರಿ ಕ್ಲಬ್ ಮೊಡಂಕಾಪು ಸಹಕಾರದೊಂದಿಗೆ ಅನಿವಾಸಿ ಉದ್ಯಮಿಯೊಬ್ಬರು ಕೊಡಮಾಡಿದ “ಸ್ಮಾರ್ಟ್ ಕಂಪ್ಯೂಟರ್ ಕ್ಲಾಸ್” ಉದ್ಘಾಟನೆ ಸಮಾರಂಭ ಇತ್ತೀಚೆಗೆ ನಡೆಯಿತು.
ಶಿಕ್ಷಣ ಸಂಯೋಜಕಿ ಸುಜಾತಾ ಕುಮಾರಿ ಉದ್ಘಾಟಿಸಿದರು ರೋಟರಿ ಕ್ಲಬ್ ಮೊಡಂಕಾಪು ಇದರ ಅಧ್ಯಕ್ಷ ಪಿ ಎ ರಹೀಂ ಅಧ್ಯಕ್ಷತೆ ವಹಿಸಿದ್ದರು.
ರೋಟರಿ ಕ್ಲಬ್ ಮೊಡಂಕಾಪು ಇದರ ಪ್ರಧಾನ ಕಾರ್ಯದರ್ಶಿ ಅಲೆಕ್ಸಾಂಡರ್ ಲೋಬೋ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹುಸೈನ್, ಅನುಗ್ರಹ ಶಿಕ್ಷಣ ಸಂಸ್ಥೆಯ ಸಂಚಾಲಕ ಅಮಾನುಲ್ಲಾ ಖಾನ್ , ಸಿ.ಆರ್.ಪಿ ಪ್ರೇಮಲತಾ, ಬಿ.ಆರ್.ಸಿ ನಾಗರತ್ನ, ಎಸ್ಡಿಎಂಸಿ ಸದಸ್ಯ ಇಸ್ಮಾಯಿಲ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಗುಣ, ಸಾಮಾಜಿಕ ಕಾರ್ಯಕರ್ತ ಉಮ್ಮರ್ ಸಾಲೆತ್ತೂರು ಮೊದಲಾದವರು ಉಪಸ್ಥಿತರಿದ್ದರು.
ಶಾಹಿರ್, ಇಝಾನ್, ಶಾಕಿಬ್ ಪ್ರಾರ್ಥನೆ ನೆರವೇರಿಸಿದರು. ಶಾಲಾ ಮುಖ್ಯ ಶಿಕ್ಷಕ ಸುಧೀರ್ ಜಿ. ಸ್ವಾಗತಿಸಿದರು. ನಿವೇದಿತ ಕೆ ವಂದಿಸಿದರು. ಗೀತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.